ಮಂಗಳೂರು ಗಣೇಶೋತ್ಸವ ವೈಭವದ ಶೋಭಾಯಾತ್ರೆ

| Published : Sep 14 2024, 01:45 AM IST

ಸಾರಾಂಶ

ಪ್ರತಿಷ್ಠಾಪಿಸಲ್ಪಟ್ಟ ಸರ್ವಾಲಂಕೃತ ಗಣಪತಿ ದೇವರ ವಿಗ್ರವನ್ನು ಅಲಂಕೃತ ಮಂಟಪದಲ್ಲಿರಿಸಿ, ವಿವಿಧ ಸ್ತಬ್ಧಚಿತ್ರಗಳು, ಭಜನಾ ತಂಡಗಳ ಉಪಸ್ಥಿತಿಯಲ್ಲಿ ನಡೆದ ಶೋಭಾಯಾತ್ರೆಯನ್ನು ಸಹಸ್ರಾರು ಭಕ್ತರು ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಮಂಗಳೂರು ವತಿಯಿಂದ 32ನೇ ವರ್ಷದ ಮಂಗಳೂರು ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಶುಕ್ರವಾರ ರಾತ್ರಿ ಸಂಭ್ರಮದಿಂದ ನೆರವೇರಿತು.

ಪ್ರತಿಷ್ಠಾಪಿಸಲ್ಪಟ್ಟ ಸರ್ವಾಲಂಕೃತ ಗಣಪತಿ ದೇವರ ವಿಗ್ರವನ್ನು ಅಲಂಕೃತ ಮಂಟಪದಲ್ಲಿರಿಸಿ, ವಿವಿಧ ಸ್ತಬ್ಧಚಿತ್ರಗಳು, ಭಜನಾ ತಂಡಗಳ ಉಪಸ್ಥಿತಿಯಲ್ಲಿ ನಡೆದ ಶೋಭಾಯಾತ್ರೆಯನ್ನು ಸಹಸ್ರಾರು ಭಕ್ತರು ವೀಕ್ಷಿಸಿದರು.

ನೆಹರೂ ಮೈದಾನದಿಂದ ಹೊರಟ ಆಕರ್ಷಕ ಶೋಭಾಯಾತ್ರೆಯು ನಗರದ ರಾಜಬೀದಿಯಲ್ಲಿ ಸಾಗಿ ರಥಬೀದಿ ಮಹಾಮಾಯಿ ಕೆರೆಯಲ್ಲಿ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಂಡಿತು.

ಸೆ.7ರಂದು ಪ್ರತಿಷ್ಠಾಪನೆ ನೆರವೇರಿದ್ದು, ಶುಕ್ರವಾರದವರೆಗೆ ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಗಳು, ಧಾರ್ಮಿಕ ಸಭೆಗಳನ್ನು ನಡೆಸಲಾಗಿತ್ತು. ಕೊನೆಯ ದಿನವಾದ ಶುಕ್ರವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ವೇಳೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕ ವೇದವ್ಯಾಸ ಕಾಮತ್‌ ಸಹಿತ ಹಲವು ಗಣ್ಯರು ಹಾಜರಿದ್ದರು.