ಮಂಗಳೂರು ಪಾಕಿಸ್ತಾನದಲ್ಲಿಲ್ಲ: ಕೆ.ಎಸ್.ಈಶ್ವರಪ್ಪ

| Published : May 29 2024, 12:46 AM IST

ಸಾರಾಂಶ

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂಧರು ನಮ್ಮ ಸರ್ಕಾರ, ಟಿಪ್ಪು ಸುಲ್ತಾನ್‌ನ ರಾಜ್ಯ ಎನ್ನುತ್ತಿದ್ದಾರೆ. ಹೀಗೆ ಬಿಟ್ಟರೆ ಅವರು ಹಿಂದುಗಳ ಮನೆಗೂ ಬಂದು ನಮಾಜ್ ಮಾಡುತ್ತಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯೋ ಸತ್ತಿದೆಯೋ ಗೊತ್ತಾಗುತ್ತಿಲ್ಲ ಎಂದವರು ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಂಗಳೂರಿನಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು, ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂಧರು ನಮ್ಮ ಸರ್ಕಾರ, ಟಿಪ್ಪು ಸುಲ್ತಾನ್‌ನ ರಾಜ್ಯ ಎನ್ನುತ್ತಿದ್ದಾರೆ. ಹೀಗೆ ಬಿಟ್ಟರೆ ಅವರು ಹಿಂದುಗಳ ಮನೆಗೂ ಬಂದು ನಮಾಜ್ ಮಾಡುತ್ತಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯೋ ಸತ್ತಿದೆಯೋ ಗೊತ್ತಾಗುತ್ತಿಲ್ಲ ಎಂದವರು ಹೇಳಿದರು.

ಚೆನ್ನಗಿರಿಯಲ್ಲಿ ನಿರಪರಾಧಿ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಯಿತು. ಮುಸಲ್ಮಾನರು ಏನು ಬೇಕಾದರೂ ಮಾಡಬಹುದು ಎನ್ನಲು, ಇದು ಪಾಕಿಸ್ತಾನ ಅಲ್ಲ ಹಿಂದುಸ್ಥಾನ. ಮಂಗಳೂರು ಪಾಕಿಸ್ತಾನದಲ್ಲಿಲ್ಲ ನೆನಪಿಟ್ಟುಕೊಳ್ಳಿ. ವೀಡಿಯೋ, ಪತ್ರಿಕೆ ವರದಿ ಆಧರಿಸಿ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲೀಗ ಪೊಲೀಸ್ ಠಾಣೆಗಳಿಗೂ ಪ್ರೈವೆಟ್ ಸೆಕ್ಯೂರಿಟಿ ಕೊಡಬೇಕೋ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಗೃಹ ಮಂತ್ರಿಗಳು ಆ ಸ್ಥಾನದಲ್ಲಿ ಉಳಿಯಲು ಸಮರ್ಥ ಅಲ್ಲ. ಉಡುಪಿ ಗ್ಯಾಂಗ್ ವಾರ್, ಕೊಲೆಗಳು, ಠಾಣೆಗಳ ಮೇಲೆ ದಾಳಿಯನ್ನು ಸಿಎಂ, ಗೃಹ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ. ಕ್ರಮ ತೆಗೆದುಕೊಳ್ಳದಿದ್ದರೆ ಇಡೀ ರಾಜ್ಯದಲ್ಲಿ ಹಿಂದೂ ಸಮಾಜ ಜಾಗೃತವಾಗಬೇಕಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.