ಮಂಗಳೂರು: ಕೊಂಕಣಿ ರಾಷ್ಟ್ರ ಮಾನ್ಯತಾ ದಿನಾಚರಣೆ

| Published : Aug 25 2025, 01:00 AM IST

ಸಾರಾಂಶ

ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿಯ ರಾಷ್ಟ್ರ ಮಾನ್ಯತಾ ದಿನಾಚರಣೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್ ವಿಠಲ್‌ ಕಿಣಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಮಂಗಳೂರು: ಕೊಂಕಣಿ ಭಾಷಿಕರು ದೇಶದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ, ರಾಷ್ಟ್ರ ಕಟ್ಟುವ ಎಲ್ಲ ಸ್ತರಗಳಲ್ಲಿ ತಮ್ಮ ಇರುವನ್ನು ತೋರ್ಪಡಿಸುವ ಕಾರಣದಿಂದಾಗಿ ಕೊಂಕಣಿ ಭಾಷೆಯು ಸಂವಿಧಾನದ ಸ್ಥಾನಮಾನ ಪಡೆಯುವಂತಾಗಿದೆ ಎಂದು ಗೋವಾದ ಪ್ರಾಚಾರ್ಯ ಡಾ. ಭೂಷಣ ಭಾವೆ ಅಭಿಪ್ರಾಯಪಟ್ಟರು. ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿದ ಕೊಂಕಣಿಯ ರಾಷ್ಟ್ರ ಮಾನ್ಯತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ್ ವಿಠಲ್‌ ಕಿಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನಗರೇಶ ಅವರು ಕೊಂಕಣಿ ರಾಷ್ಟ್ರ ಮಾನ್ಯತಾ ದಿನಾಚರಣೆ ಕುರಿತು ವಿಡಿಯೊ ಸಂದೇಶ ನೀಡಿದರು.

ಪೂನಾದ ಕೊಂಕಣಿ ಭಾಷಾ ಕಲಾ ಕೇಂದ್ರದ ಟ್ರಸ್ಟಿ ಅನ್ವಿತ್ ಪಾಠಕ್ ಹಾಗೂ ಸಂಯೋಜಕಿ ಪ್ರಾಚೀ ನವತೇ ಅತಿಥಿಗಳಾಗಿದ್ದರು.

ಇತ್ತೀಚೆಗೆ ಅಗಲಿದ ಭಾಷಾ ಶಾಸ್ತ್ರಜ್ಞ ಡಾ. ರೊಕಿ ಮಿರಾಂದಾ ಸ್ಮರಣಾರ್ಥ ಹಿರಿಯ ಕೊಂಕಣಿ ಸಾಹಿತಿ ಗೋಕುಲದಾಸ್ ಪ್ರಭು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಮುಖ್ಯಸ್ಥ ಮೆಲ್ವಿನ್ ರೊಡ್ರಿಗಸ್ ಉಪನ್ಯಾಸ ನೀಡಿದರು. ಪುಷ್ಪಾ ಬೊಬಡೆ ಇದ್ದರು. ಎಚ್.ಎಂ. ಪೆರ್ನಾಲ್ ಉಪನ್ಯಾಸ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಶಾಲೆಗಳಲ್ಲಿ ತೃತೀಯ ಭಾಷೆ ಕೊಂಕಣಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಇತ್ತೀಚೆಗೆ ಜಾಗತಿಕ ದಾಖಲೆ ಸ್ಥಾಪಿಸಿದ ಕೊಂಕಣಿಯ ಯುವ ಭರತ ನಾಟ್ಯ ಕಲಾವಿದೆ ರೆಮೊನಾ ಇವೆಟ್ ಪಿರೆರಾ ಅವರನ್ನು ಸನ್ಮಾನಿಸಲಾಯಿತು.