ಸಾರಾಂಶ
ಇದು ಯಾವುದೇ ರೀತಿಯ ಉದ್ಯೋಗವಾಗಿರದೆ, ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಆಕಾಶವಾಣಿಯಲ್ಲಿ ನಿಯೋಜನೆ ಮೇರೆಗೆ ಉದ್ಘೋಷಕ/ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ಆಕಾಶವಾಣಿಯಲ್ಲಿ ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಗಳಲ್ಲಿ ನಿಯೋಜನೆ ಮೇರೆಗೆ ಉದ್ಘೋಷಕರು/ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು ಯಾವುದೇ ರೀತಿಯ ಉದ್ಯೋಗವಾಗಿರದೆ, ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು.ಅಭ್ಯರ್ಥಿಗಳು ಪದವಿ ಉತ್ತೀರ್ಣರಾಗಿರಬೇಕು ಹಾಗೂ 50 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಈ ಕುರಿತು ದಾಖಲೆಗಳ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು.
ಅಭ್ಯರ್ಥಿಗಳು 354 ರುಪಾಯಿ ಡಿ.ಡಿ.ಯನ್ನು DDO, Akashvani Bengaluru (Payable at Bengaluru) ಇವರಿಗೆ ಪಾವತಿಯಾಗುವಂತೆ ಪಡೆದು ಅರ್ಜಿಯೊಂದಿಗೆ ಕಳುಹಿಸಿಕೊಡಬೇಕು. ಅಥವಾ ಪ್ರಸಾರ ಭಾರತಿಯ, ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆ ಸಂಖ್ಯೆ 10902815290 ಐಎಫ್‌ಎಸ್‌ಸಿ ಸಂಖ್ಯೆ SBIN0040016 ಗೆ ಜಮೆ ಮಾಡಿ ರಸೀದಿಯನ್ನು ಲಗತ್ತಿಸಬಹುದು. ಅರ್ಜಿಯನ್ನು ದಿನಾಂಕ 31.10.2024 ರ ಒಳಗೆ ತಲುಪುವಂತೆ ಕಳುಹಿಸಬೇಕು.ಅರ್ಜಿ ಸಲ್ಲಿಸುವ ವಿಳಾಸ: ನಿಲಯ ನಿರ್ದೇಶಕರು, ಆಕಾಶವಾಣಿ, ಬಿಜೈ ಪೋಸ್ಟ್, ಕದ್ರಿ ಹಿಲ್ಸ್, ಮಂಗಳೂರು 575 004.
ಅರ್ಜಿ ವಿವರಗಳಿಗಾಗಿ hr.avmng@gmail.com ಗೆ ಸಂಪರ್ಕಿಸಬಹುದು ಅಥವಾ ನಿಲಯಕ್ಕೆ ಭೇಟಿ ನೀಡಬಹುದು.ಆಯ್ಕೆಗೊಂಡವರಿಗೆ ನಿಯಮಾನುಸಾರ ಸಂಭಾವನೆ ನೀಡಲಾಗುವುದು ಎಂದು ಆಕಾಶವಾಣಿಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.