ಮಂಗಳೂರು: ತುಂಬೆ ಯುನಿವರ್ಸಿಟಿ ಆಸ್ಪತ್ರೆ ಮೊದಲ ಬಾರಿಗೆ ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದರೊಂದಿಗೆ ತುಂಬೆ ಅಕಾಡೆಮಿಕ್ ಮೆಡಿಕಲ್ ಸೆಂಟರ್‌ನಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಉನ್ನತ ಮಟ್ಟದ ಸೇವೆ

ಮಂಗಳೂರು: ತುಂಬೆ ಯುನಿವರ್ಸಿಟಿ ಆಸ್ಪತ್ರೆ ಮೊದಲ ಬಾರಿಗೆ ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದರೊಂದಿಗೆ ತುಂಬೆ ಅಕಾಡೆಮಿಕ್ ಮೆಡಿಕಲ್ ಸೆಂಟರ್‌ನಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಉನ್ನತ ಮಟ್ಟದ ಸೇವೆಗಳ ಆರಂಭವಾಗಿದೆ.

ಈ ಪ್ರಥಮ ಶಸ್ತ್ರಚಿಕಿತ್ಸೆಯನ್ನು 51 ವರ್ಷದ ವ್ಯಕ್ತಿಯೊಬ್ಬರಿಗೆ ನಡೆಸಲಾಯಿತು. ಅವರಿಗೆ ತೀವ್ರ ಇಸ್ಕೆಮಿಕ್ ಕೊರೊನರಿ ಆರ್ಟರಿ ರೋಗ ಉಲ್ಭಣವಾಗಿದ್ದು, ಹೃದಯಕ್ಕೆ ರಕ್ತಪ್ರವಾಹವನ್ನು ಗಂಭೀರವಾಗಿ ನಿರ್ಬಂಧಿಸುವ ಎಡ ಮುಖ್ಯ ಕೊರೊನರಿ ಆರ್ಟರಿಯಲ್ಲಿ ಸಮಸ್ಯೆಯಾಗಿತ್ತು. ಜತೆಗೆ ಅವರಿಗೆ ಡಯಾಬಿಟಿಸ್ ಮೆಲ್ಲಿಟಸ್ ಇದ್ದು, ಉನ್ನತ ಹೃದಯ ಆರೈಕೆ ಅಗತ್ಯವಿತ್ತು.

ಶಸ್ತ್ರಚಿಕಿತ್ಸೆಯಲ್ಲಿ ಆಫ್-ಪಂಪ್ (ಬೀಟಿಂಗ್ ಹಾರ್ಟ್) ತಂತ್ರವನ್ನು ಬಳಸಿ ಎರಡು ರಕ್ತನಾಳಗಳ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ವಿಧಾನದಲ್ಲಿ ಯಾವುದೇ ಯಂತ್ರವನ್ನು ಬಳಸದೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೃದಯ ಸ್ಪಂದಿಸುತ್ತಿರುವಂತೆಯೇ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇದರಿಂದ ದೇಹದ ಮೇಲೆ ಶಸ್ತ್ರಚಿಕಿತ್ಸೆಯ ಒತ್ತಡ ಕಡಿಮೆಯಾಗುತ್ತದೆ ಮತ್ತು ರೋಗಿಗಳಲ್ಲಿ ವೇಗವಾದ ಚೇತರಿಕೆ, ಕಡಿಮೆ ಸಂಕೀರ್ಣತೆಗಳು ಹಾಗೂ ಉತ್ತಮ ಫಲಿತಾಂಶ ಕಂಡುಬರುತ್ತದೆ.

ಆಸ್ಪತ್ರೆಯ ಡಾ. ಖಾಲೇದ್ ಫರ್ರಾಗ್ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ರೋಗಿಯು ಇದೀಗ ತಮ್ಮ ಕುಟುಂಬದೊಂದಿಗೆ ಮನೆಗೆ ಮರಳಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.