ಸಾರಾಂಶ
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಇತ್ತೀಚೆಗೆ ‘ಡೆವೆಲಪ್ಪಿಂಗ್ ಕ್ಯಾನ್ಸರ್ ಮೊಡೆಲ್ಸ್ ಇನ್ವಿಟ್ರೋ ಆಂಡ್ ಇನ್ವಿವೋ: ಅಡ್ವಾಂಟೇಜಸ್ ಆಂಡ್ ಲಿಮಿಟೇಶನ್ಸ್’ ವಿಷಯದಡಿ ಗ್ಯಾನ್ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಇತ್ತೀಚೆಗೆ ಗ್ಯಾನ್ ಕಾರ್ಯಕ್ರಮ ನಡೆಯಿತು. ‘ಡೆವೆಲಪ್ಪಿಂಗ್ ಕ್ಯಾನ್ಸರ್ ಮೊಡೆಲ್ಸ್ ಇನ್ವಿಟ್ರೋ ಆಂಡ್ ಇನ್ವಿವೋ: ಅಡ್ವಾಂಟೇಜಸ್ ಆಂಡ್ ಲಿಮಿಟೇಶನ್ಸ್’ ವಿಷಯದಡಿ ಆಯೋಜಿಸಲಾದ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ವಿಶ್ವವಿದ್ಯಾಲಯದ ಡಾ. ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಜರುಗಿತು.ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಗ್ಯಾನ್ ಕೋರ್ಸ್ ಸಂಯೋಜಕ ಪ್ರೊ.ಚಂದ್ರಶೇಖರ್ ಗ. ಜೋಷಿ ಇದ್ದರು.
ಅಮೆರಿಕದ ಯುನಿವರ್ಟಿಸಿ ಆಫ್ ಮಿಯಾಮಿ, ಸಿಲ್ವೆಸ್ಟರ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಾಯಕ ನಿರ್ದೇಶಕ ಡಾ. ನಾಗರಾಜ್ ನಾಗತಿಹಳ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಿದರು.ವಿ.ವಿ. ಐಬಿಎಂ ಇನ್‌ಕ್ಯುಬೇಶನ್ ಸೆಂಟರ್‌ನಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಮಂಜಯ್ಯ ಡಿ.ಎಚ್. ವಿದ್ಯಾರ್ಥಿಗಳಿಗೆ ಗ್ಯಾನ್ ಕೋರ್ಸ್ ಮಹತ್ವ ವಿವಹಿಸಿದರು.
ಗ್ಯಾನ್ ಸಂಯೋಜಕ ಪ್ರೊ. ಗಣೇಶ್ ಸಂಜೀವ ವಿದ್ಯಾರ್ಥಿಗಳಿಗೆ ಕೋರ್ಸ್ ಉಪಯುಕ್ತತೆ ಮಾಹಿತಿ ನೀಡಿದರು.ಜೀವರಸಾಯನ ಶಾಸ್ತ್ರ ವಿಭಾಗದ ಹಾಗೂ ಗ್ಯಾನ್ ಕಾರ್ಯಕ್ರಮ ಸಂಯೋಜಕ ಪ್ರೊ. ಚಂದ್ರಶೇಖರ್ ಜಿ. ಜೋಶಿ ಇದ್ದರು.