14ರಿಂದ ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆಯಲ್ಲಿ ಮಾವು ಮೇಳ

| Published : May 11 2025, 01:20 AM IST

14ರಿಂದ ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆಯಲ್ಲಿ ಮಾವು ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಮೇಳದಲ್ಲಿ ಸ್ಥಳೀಯ ಮತ್ತು ಹೊರಜಿಲ್ಲೆಗಳ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್, ಕಾಲಪ್ಪಾಡಿ, ಹೊರಜಿಲ್ಲೆಯ ತಳಿಗಳಾದ ಮಲ್ಲಿಕ, ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್ ಬೇಬಿ ಎನ್ನುವ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿರುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಇಲಾಖೆ ಆವರಣದಲ್ಲಿ ಮೇ 14ರಿಂದ 18ರ ವರೆಗೆ ಸೀಕೋ ಮತ್ತು ಯುಬಿ ಫ್ರುಟ್ಸ್ ಸಂಸ್ಥೆಗಳ ಆಯೋಜನೆಯಲ್ಲಿ ಮಾವು ಮೇಳ-2025 ನಡೆಯಲಿದೆ.ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರ ಅಬ್ದುಲ್ ಕುಂಞ ವಿವರಗಳನ್ನು ನೀಡಿದರು.ಐದು ದಿನ ನಡೆಯುವ ಈ ಮಾವು ಮೇಳವನ್ನು 14ರಂದು ಸಂಜೆ 4 ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.

ಮೇಳದಲ್ಲಿ ಸ್ಥಳೀಯ ಮತ್ತು ಹೊರಜಿಲ್ಲೆಗಳ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್, ಕಾಲಪ್ಪಾಡಿ, ಹೊರಜಿಲ್ಲೆಯ ತಳಿಗಳಾದ ಮಲ್ಲಿಕ, ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್ ಬೇಬಿ ಎನ್ನುವ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿರುತ್ತದೆ ಎಂದು ತಿಳಿಸಿದರು.

ಮಂಗಳೂರಿನ ಯುಬಿ ಫ್ರುಟ್ಸ್‌ ಸಂಸ್ಥೆಯು 50 ವರ್ಷಗಳಿಂದ ಮಾವಿನ ವ್ಯವಹಾರ ನಡೆಸುತ್ತಿದೆ. 30 ವರ್ಷಗಳಿಂದ ತೋಟಗಾರಿಕಾ ಇಲಾಖೆಯ ಮಾವಿನ ಹಣ್ಣುಗಳ ತೋಟದ ಹರಾಜಿನಲ್ಲಿ ಭಾಗವಹಿಸಿ ಹಣ್ಣು ಕೊಯ್ಲು ಮಾರಾಟ ಮಾಡುತ್ತಿದೆ.ಸುದ್ದಿಗೋಷ್ಠಿಯಲ್ಲಿ ಯುಬಿ ಫ್ರುಟ್ಸ್ ಸಂಸ್ಥೆಯ ಪಾಲುದಾರರಾದ ಸಮೀರ್, ಸಿದ್ದಿಕ್ ಮತ್ತು ವ್ಯವಸ್ಥಾಪಕ ಮೊಹಮ್ಮದ್ ಹ್ಯಾರೀಸ್ ಉಪಸ್ಥಿತರಿದ್ದರು.