ಕನ್ನಡಪ್ರಭ ವಾರ್ತೆ ಮಾಲೂರು
ಕಳೆದ ಎರಡು ದಿನ ಹಿಂದೆ ತಾಲೂಕಿನ ಕೆಲವು ಭಾಗಗಳಲ್ಲಿ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮಾವು, ಬಾಳೆತೋಟ, ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳು ಹಾನಿಯಾಗಿದ್ದು ರೈತರು ಕಣ್ಣೀರು ಹಾಕಿದ್ದಾರೆ.ತಾಲೂಕಿನ ಸಂತೆಹಳ್ಳಿ ಮೇಡಹಟ್ಟಿ, ಕರಿಯಪ್ಪನಹಳ್ಳಿ, ಸರ್ವೆ ನಂಬರ್‌ಗೆ ಸೇರಿದ ಸುಮಾರು ೧೫೦ ಎಕರೆ ಫಸಲಿಗೆ ಬಂದಿದ್ದ ಮಾವಿನ ತೋಟಗಳಲ್ಲಿ ಮಾವಿನ ಕಾಯಿಗಳು ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ಉದುರಿ ಬಿದ್ದಿದ್ದು ರೈತರಿಗೆ ಬಹಳ ನಷ್ಟ ಉಂಟಾಗಿದೆ. ಅದೇ ರೀತಿ ಸುಮಾರು ೧೦ ಎಕರೆ ಬಾಳೆ ತೋಟ ಹಾಗೂ ತರಕಾರಿ ಬೆಳೆಗಳಿಗೆ ಈ ಗ್ರಾಮಗಳ ಸುತ್ತಮುತ್ತ ಮಳೆಯಿಂದ ಹಾನಿಯಾಗಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮಾವು, ಬಾಳೆ, ಟೊಮೆಟೊ ಸೇರಿ ತರಕಾರಿ ಬೆಳೆಗಳಿಗೆ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ಈ ಕೂಡಲೇ ನಷ್ಟವಾಗಿರುವ ಬೆಳೆಗಳಿಗೆ ಸರ್ಕಾರ ತೋಟಗಳನ್ನು ಪರಿಶೀಲಿಸಿ ನಷ್ಟ ಪರಿಹಾರ ಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.ಕೋಟ್...ತಾಲೂಕಿನ ಸಂತೆಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಆಲಿಕಲ್ಲು ಮಳೆಗೆ ನಮ್ಮಮಾವಿನ ತೋಟ ಸೇರಿ ಸುತ್ತಮುತ್ತಲು ೧೫೦ ಎಕರೆಗೂ ಹೆಚ್ಚು ಮಾವಿನ ತೋಟ ಹಾಗೂ ಬಾಳೆ ತರಕಾರಿ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ನಷ್ಟ ಉಂಟಾಗಿದೆ. ಈ ಕೂಡಲೇ ಸರ್ಕಾರ ಗಮನಹರಿಸಿ ಬೆಳೆ ನಷ್ಟ ಪರಿಹಾರ ಅಂದಾಜು ಮಾಡಿಸಬೇಕು ರೈತರಿಗೆ ಆಗಿರುವ ನಷ್ಟ ಬಗ್ಗೆ ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ಕೊಡಬೇಕು.
ಹರೀಶ್ ಕುಮಾರ್, ಸಂತೇಹಳ್ಳಿ ರೈತ