ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಅಂಗಸಂಸ್ಥೆ ಕಸ್ತೂರ್ಬಾ ಆಸ್ಪತ್ರೆಯ ಎದೆಹಾಲು ಬ್ಯಾಂಕ್ ‘ಮಾತೃ-ಅಮೃತ ಮಿಲ್ಕ್ ಬ್ಯಾಂಕ್''’ಗೆ ಫೆಡರೇಶನ್ ಆಫ್‌ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಫಿಕ್ಕಿ) ನೀಡುವ 18ನೇ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ ಸಮಾರಂಭದಲ್ಲಿ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ ವಿಭಾಗದ ಪ್ರಶಸ್ತಿ ಲಭಿಸಿದೆ.

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಅಂಗಸಂಸ್ಥೆ ಕಸ್ತೂರ್ಬಾ ಆಸ್ಪತ್ರೆಯ ಎದೆಹಾಲು ಬ್ಯಾಂಕ್ ‘ಮಾತೃ-ಅಮೃತ ಮಿಲ್ಕ್ ಬ್ಯಾಂಕ್''''''''’ಗೆ ಫೆಡರೇಶನ್ ಆಫ್‌ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಫಿಕ್ಕಿ) ನೀಡುವ 18ನೇ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ ಸಮಾರಂಭದಲ್ಲಿ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ ವಿಭಾಗದ ಪ್ರಶಸ್ತಿ ಲಭಿಸಿದೆ.

ನವದೆಹಲಿಯ ಅ. 27ರಂದು ನಡೆದ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಡಾ. ಶಶಿ ತರೂರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಆಸ್ಪತ್ರೆಯ ಪರವಾಗಿ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.ಈ ಬಾರಿ ಫಿಕ್ಕಿಗೆ ಒಟ್ಟು 157 ನಾಮನಿರ್ದೇಶನಗಳು ಬಂದಿದ್ದು, ಕಸ್ತೂರ್ಬಾ ಆಸ್ಪತ್ರೆ ಸಲ್ಲಿಸಿದ್ದ ಮೂರೂ ಉಪಕ್ರಮಗಳು ತಂತಮ್ಮ ವಿಭಾಗದಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ.ಸಮುದಾಯವನ್ನು ತಲುಪುವ ಪ್ರಯತ್ನ: ಈ ಸಾಧನೆ ಮಾಡಿರುವ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ತಂಡವನ್ನು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮತ್ತು ಕುಲಪತಿ ಡಾ. ಶರತ್ ಕೆ. ರಾವ್ ಅವರು ಅಭಿನಂದಿಸಿ, ಫಿಕ್ಕಿಯ ಈ ಮನ್ನಣೆಯು ಆರೋಗ್ಯ ಸೇವೆಯಲ್ಲಿ ನಾವು ಆಸ್ಪತ್ರೆಯ ಗೋಡೆಗಳನ್ನು ಮೀರಿ ಸಮುದಾಯವನ್ನು ತಲುಪುವ ಪ್ರಯತ್ನಕ್ಕೆ ಮನ್ನಣೆಯಾಗಿದೆ. ಹಾಲು ದಾನ ಮಾಡಿದ ತಾಯಂದಿರಿಗೆ ಹಾಗೂ ಈ ಬ್ಯಾಂಕನ್ನು ಯಶಸ್ವಿಗೊಳಿಸಿದ ವೈದ್ಯರು, ಶುಶ್ರೂಷಕರು ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆಗಳು ಎಂದಿದ್ದಾರೆ.

ಏನಿದು ಎದೆಹಾಲು ಬ್ಯಾಂಕ್ ?

ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್, ಹಾಲುಣಿಸುವ ತಾಯಂದಿರು ಸ್ವಯಂಪ್ರೇರಿತವಾಗಿ ದಾನ ಮಾಡುವ ಎದೆಹಾಲನ್ನು ಸಂಗ್ರಹಿಸಿ, ಪಾಶ್ಚರೀಕರಿಸಿ ಶೇಖರಿಸುತ್ತದೆ. ಅವಧಿಪೂರ್ವ ಜನಿಸಿದ, ಕಡಿಮೆ ತೂಕದ ಹಾಗೂ ಅನಾರೋಗ್ಯಪೀಡಿತ ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕದಲ್ಲಿ ಈ ಹಾಲನ್ನು ನೀಡಲಾಗುತ್ತದೆ. ಇದರಿಂದ ಅತ್ಯಂತ ದುರ್ಬಲ ಶಿಶುಗಳಿಗೂ ಎದೆಹಾಲಿನ ರಕ್ಷಣಾತ್ಮಕ ಪ್ರಯೋಜನಗಳು ದೊರೆಯುತ್ತವೆ. ಈ ಸಾಲಿನಲ್ಲಿ 493 ಸ್ವಯಂಪ್ರೇರಿತ ದಾನಿ ತಾಯಂದಿರಿಂದ 538 ಲೀಟರ್‌ಗಿಂತ ಹೆಚ್ಚು ಎದೆಹಾಲನ್ನು ಸಂಗ್ರಹಿಸಿ 660 ನವಜಾತ ಶಿಶುಗಳಿಗೆ ಉಣಿಸಲಾಗಿದೆ ಕಳೆದ ಸಾಲಿನಲ್ಲಿ 430 ಶಿಶುಗಳಿಗೆ ಹಾಗೂ 300 ಲೀಟರ್ ಹಾಲುಣಿಸಲಾಗಿತ್ತು