ಮಣಿಪಾಲ: ಐಸಿಡಬ್ಲ್ಯುಎ ರಾಷ್ಟ್ರೀಯ ಸಮ್ಮೇಳನ ಸಂಪನ್ನ

| Published : Dec 16 2023, 02:00 AM IST

ಸಾರಾಂಶ

ಮಣಿಪಾಲದ ನಿರ್ಮಾತೃ ಡಾ.ಟಿ.ಎಂ.ಎ.ಪೈ ಅವರ ೧೨೫ ನೇ ಹುಟ್ಟಿದ ವರ್ಷದ ಪ್ರಯುಕ್ತ ಮಾಹೆಯ ಜಿಯೋಪೊಲಿಟಿಕ್ಸ್ ಮತ್ತು ಇಂಟರ್ನ್ಯಾಷನಲ್ ರಿಲೇಷನ್ಸ್, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಒಟ್ಟಾಗಿ ಈ ರಾಷ್ಟ್ರೀಯ ಸಮ್ಮೇಳನ ಆಯೋಜನೆ

ಕನ್ನಡಪ್ರಭ ವಾರ್ತೆ ಮಣಿಪಾಲ

ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೆರ್ಸ್ (ಐಸಿಡಬ್ಲ್ಯುಎ) ವತಿಯಿಂದ ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್ ಎಜ್ಯುಕೇಶನ್ (ಮಾಹೆ) ಸಹಯೋಗದಲ್ಲಿ ‘ಭಾರತ, ಅಂತರಾಷ್ಟ್ರೀಯ ಭದ್ರತೆ, ಶಾಂತಿ ಹಾಗೂ ಮಾಧ್ಯಮ’ ಎಂಬ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಶಾಂತಿಯುತ, ನ್ಯಾಯಯುತ ಮತ್ತು ಸುಸ್ಥಿರ ಜಾಗತಿಕ ವ್ಯವಸ್ಥೆಯ ನಿರ್ಮಾಣಕ್ಕೆ ಕೈಜೋಡಿಸುವ ಆಶಯ ವ್ಯಕ್ತಪಡಿಸಿತು.

ಮಣಿಪಾಲದ ನಿರ್ಮಾತೃ ಡಾ.ಟಿ.ಎಂ.ಎ.ಪೈ ಅವರ ೧೨೫ ನೇ ಹುಟ್ಟಿದ ವರ್ಷದ ಪ್ರಯುಕ್ತ ಮಾಹೆಯ ಜಿಯೋಪೊಲಿಟಿಕ್ಸ್ ಮತ್ತು ಇಂಟರ್ನ್ಯಾಷನಲ್ ರಿಲೇಷನ್ಸ್, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಒಟ್ಟಾಗಿ ಈ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿತ್ತು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಾಹೆ ಉಪಕುಲಪತಿ ಲೆ.ಜ. ಡಾ.ಎಂ.ಡಿ. ವೆಂಕಟೇಶ್ ಅವರು, ಶಾಂತಿ, ನ್ಯಾಯ ಮತ್ತು ಸುಸ್ಥಿರ ಜಾಗತಿಕ ವ್ಯವಸ್ಥೆಗೆ ವಿಶ್ವಸಂಸ್ಥೆಯಲ್ಲಿ ಸದ್ಯ ಇರುವ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ವಿದ್ವಾಂಸ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಿ.ಎಸ್. ರಾಘವನ್, ನಿವೃತ್ತ ರಾಯಭಾರಿ ಪಂಕಜ್ ಶರಣ್, ಯುನೆಸ್ಕೋ ಪೀಸ್ ಚೇರ್ ನ ಮುಖ್ಯಸ್ಥ ಪ್ರೊ.ಎ.ಡಿ.ನಳಪತ್, ಐಸಿಡಬ್ಲ್ಯೂಎ ಪ್ರತಿನಿಧಿ ಡಾ.ಸ್ತುತಿ ಬ್ಯಾನರ್ಜಿ, ಡಾ.ಬಿ.ಪಿ.ಸಂಜಯ್, ಡಾ.ರಾಜಾರಾಮ್ ತೋಳ್ಪಡಿ, ಡಾ.ಶೇಷಾದ್ರಿ ಚಾರಿ, ಪ್ರಭಾ ರಾವ್, ಡಾ.ಅಜಯ್ ಲೇಲೆ, ಡಾ.ರಾಘೋತ್ತಮ್, ಡಾ.ಸ್ಟಾನ್ಲೀ ಜಾನಿ, ಡಾ.ಗುರ್ಬಸ್ ಅಕ್ತಾಸ್, ಪ್ರೊ.ಕೆ.ಪಿ.ವಿಜಯಲಕ್ಷ್ಮಿ, ಪ್ರೊ.ವರದೇಶ್ ಹಿರೇಗಂಗೆ, ಡಾ.ಪದ್ಮರಾಣಿ, ಡಾಯರವೀಂದ್ರನಾಥನ್, ಶ್ರೀರಾಜ್ ಗುಡಿ, ಡಾ.ವಿಘ್ನೇಶ್ ರಾಮ್, ಡಾ.ಧನಶ್ರೀ ಜಯರಾಮ್, ಡಾ.ಸಂಕಲ್ಪ್ ಗುರ್ಜರ್, ಡಾ.ಅಮೃತ ಭಾಗವಹಿಸಿದ್ದರು. ಮಾಹೆ ಸಹಕುಲಪತಿ ಡಾ.ಮಧು ವೀರಾಘವನ್ ಹಾಗೂ ಕುಲಸಚಿವ ಡಾ.ಗಿರಿಧರ್ ಕಿಣಿ ಇದ್ದರು.