ಅಂಬಾಗಿಲು-ಮಣಿಪಾಲ ಮುಖ್ಯರಸ್ತೆಯ ಪೆರಂಪಳ್ಳಿಯಲ್ಲಿ 59 ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಉಡುಪಿ: ಅಂಬಾಗಿಲು-ಮಣಿಪಾಲ ಮುಖ್ಯರಸ್ತೆಯ ಪೆರಂಪಳ್ಳಿಯಲ್ಲಿ 59 ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಹಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟಿದ್ದ ರಸ್ತೆಯಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಉಡುಪಿ ಕ್ಷೇತ್ರಕ್ಕೆ ಮಂಜೂರಾದ ಲೋಕೋಪಯೋಗಿ ಇಲಾಖೆ ಅನುದಾನವನ್ನು ಈ ರಸ್ತೆಗೆ ಮೀಸಲಿರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಅವರು ಹೇಳಿದರು.ಈ ಸಂದರ್ಭ ಉಪಸ್ಥಿತರಿದ್ದ ಪೆರಂಪಳ್ಳಿ ಫಾತಿಮಾ ಚರ್ಚ್ ಧರ್ಮ ಗುರುಗಳಾದ ವಿಶಾಲ್ ಲೋಬೊ ಮಾತನಾಡಿ, ಪೆರಂಪಳ್ಳಿ ಭಾಗದ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಮಣಿಪಾಲ ಅಂಬಾಗಿಲು ರಸ್ತೆಯ ಕಾಂಕ್ರಿಟೀಕರಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಶಾಸಕರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಅನಿಟಾ ಬೆಲಿಂಡ, ಸುಮಿತ್ರಾ ನಾಯಕ್, ಕಿರಣ್ ಕುಮಾರ್ ಬೈಲೂರು, ಭಾರತಿ ಪ್ರಶಾಂತ, ಗಿರಿಧರ ಆಚಾರ್ಯ, ಮಂಜುನಾಥ ಮಣಿಪಾಲ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ವಾಸುದೇವ ಭಟ್ ಪೆರಂಪಳ್ಳಿ, ಶಶಾಂಕ್ ಶಿವತ್ತಾಯ, ಸುಮ ಆರ್, ಪ್ರಶಾಂತ್ ಭಟ್, ಡೆನ್ನಿಸ್ ಮಸ್ಕರೇನ್ಹಸ್, ಉಲ್ಲಾಸ್ ದೇವಾಡಿಗ ಉಪಸ್ಥಿತರಿದ್ದರು. ಶಂಕರ್ ಕುಲಾಲ್ ಪೆರಂಪಳ್ಳಿ ನಿರೂಪಿಸಿದರು.