ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್‌ (ಯುಸಿಸಿಐ)ನ ಪ್ರಥಮ ಮೀಟ್ ಮಣಿಪಾಲದ ವ್ಯಾಲಿವ್ಯೂ ಕಂಟ್ರಿ ಕ್ಲಬ್‌ನಲ್ಲಿ ಜರಗಿತು. ನೂತನ ನಾಯಕತ್ವದಡಿಲ್ಲಿ ನಡೆದ ಈ ಪ್ರಥಮ ಸದಸ್ಯರ ಸಭೆಯಲ್ಲಿ ಚೇಂಬರ್‌ನ ಮಾಸಿಕ ಪತ್ರಿಕೆ ‘ಉಡುಪಿ ಹೊರಿಝೋನ್ಸ್‌’ನ್ನು ಚೇಂಬರ್‌ನ ಪೂರ್ವಾಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಅವರು ಬಿಡುಗಡೆಗೊಳಿಸಿದರು.

ಮಣಿಪಾಲ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್‌ (ಯುಸಿಸಿಐ)ನ ಪ್ರಥಮ ಮೀಟ್ ಮಣಿಪಾಲದ ವ್ಯಾಲಿವ್ಯೂ ಕಂಟ್ರಿ ಕ್ಲಬ್‌ನಲ್ಲಿ ಜರಗಿತು. ನೂತನ ನಾಯಕತ್ವದಡಿಲ್ಲಿ ನಡೆದ ಈ ಪ್ರಥಮ ಸದಸ್ಯರ ಸಭೆಯಲ್ಲಿ ಚೇಂಬರ್‌ನ ಮಾಸಿಕ ಪತ್ರಿಕೆ ‘ಉಡುಪಿ ಹೊರಿಝೋನ್ಸ್‌’ನ್ನು ಚೇಂಬರ್‌ನ ಪೂರ್ವಾಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಅವರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಯುಸಿಸಿಐ ಸದಸ್ಯರ ನಡುವಿನ ಒಗ್ಗಟ್ಟು, ಪರಸ್ಪರ ಸಹಕಾರ ಹಾಗೂ ಚೇಂಬರ್‌ನ ಮೂಲಕ ವ್ಯಾಪಾರದ ಅವಕಾಶಗಳನ್ನು ಉತ್ತೇಜಿಸುವ ಕುರಿತು ಮಾರ್ಗದರ್ಶನ ಮಾಡಿದರು.

ವೇದಿಕೆಯಲ್ಲಿ ಯುಸಿಸಿಐ ಅಧ್ಯಕ್ಷ ನಟರಾಜ್ ಪ್ರಭು, ಉಪಾಧ್ಯಕ್ಷ ಡಾ. ವಿಜಯೇಂದ್ರ ರಾವ್, ಗೌರವ ಕಾರ್ಯದರ್ಶಿ ಮೊಹಮ್ಮದ್ ಸಮೀರ್, ಖಜಾಂಚಿ ಕೆ. ವಿನೋದ್ ಪೈ ಹಾಗೂ ಮಾಸಿಕ ಪತ್ರಿಕೆಯ ಸಂಪಾದಕ ಡಾ. ವಿಲಾಸ್ ಪೈ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಂಟಿ ಕಾರ್ಯದರ್ಶಿ ಅವಿನಾಶ್ ಪೂಜಾರಿ ಮತ್ತು ಅನೀಶ್ ಪೈ ಅವರು ನಿರೂಪಿಸಿದರು. ಯುಸಿಸಿಐ ನಿರ್ದೇಶಕರಾದ ನಾಗರಾಜ್ ಹೆಬ್ಬಾರ್, ಅತುಲ್ ಭಕ್ತ, ವಾಲ್ಟರ್ ಸಲ್ದಾನ್ಹಾ, ಶ್ರೀಪತಿ ಭಟ್ ಹಾಗೂ ಸಂತೋಷ್ ಶೆಟ್ಟಿ ಸಹಕರಿಸಿದರು, ಸಂಸ್ಥೆಯ ಪದಾಧಿಕಾರಿಗಳು ಮತ್ತು ನೂರಾರು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.