ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ವಾರ್ಡ್ 2 ರ ಸದಸ್ಯೆ ಮಂಜುಳ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಪಾಳ್ಯ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.ಣಿಗಲ್ ಪಟ್ಟಣದ 23 ವಾರ್ಡ್ ಗಳಲ್ಲಿ ಆಯ್ಕೆಯಾದ ಸದಸ್ಯರ ಪೈಕಿ ಕಾಂಗ್ರೆಸ್ 14, ಬಿಜೆಪಿ 4, ಜೆಡಿಎಸ್ 3 ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ 2 ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಪುರಸಭೆ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಹಾಗೂ ಜೆಡಿಎಸ್ ನಿಂದ ಸ್ಪರ್ಧಿಸಿ 2ನೇ ವಾರ್ಡಿನಿಂದ ಗೆದ್ದ ಮಂಜುಳಾ ಹಾಗೂ 5ನೇ ವಾರ್ಡಿನ ಸಬೀನಾ ಕಾಂಗ್ರೆಸ್ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಲ 14ರಿಂದ 16ಕ್ಕೆ ಏರಿತ್ತು. ಜೊತೆಗೆ ಇಬ್ಬರು ಪಕ್ಷೇತರರು ಕೈ ಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸಂಖ್ಯೆ 18ಕ್ಕೆ ಏರಿದೆ. ಬಿಜೆಪಿ ಪಕ್ಷದಿಂದ ಗೆದ್ದಿದ್ದ ನಾಲ್ವರ ಪೈಕಿ ಕೋಟೆ ನಾಗಣ್ಣ ಮೃತರಾಗಿದ್ದು, ಬಿಜೆಪಿ ಬಲ 3ಕ್ಕೆ ಕುಸಿದಿದೆ.
ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ಅರ್ಜಿ ಬಂದಿತ್ತು. ಅರ್ಜಿ ಹಾಕಬೇಕಾಗಿದ್ದ ಆಕಾಂಕ್ಷಿಗಳು ಕುಣಿಗಲ್ ಶಾಸಕರ ಬೆಂಗಳೂರು ಮನೆಯಲ್ಲಿದ್ದು ಚುನಾವಣೆ ಸಮಯಕ್ಕೆ ಅವರನ್ನು ಕರೆತರಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ಅರ್ಜಿಗಳು ಬಾರದ ಕಾರಣ ಮಂಜುಳಾ ನಾಗರಾಜ್ ಅಧ್ಯಕ್ಷರಾಗಿ . ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಹೊರತುಪಡಿಸಿ ಬೇರೆ ಯಾವುದೇ ಅರ್ಜಿಗಳು ಬಾರದ ಕಾರಣ ಅಧಿಕಾರಿಗಳು ಅವಿರೋಧ ಆಯ್ಕೆಯ ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ ಕುಣಿಗಲ್ ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದೆ. ಪುರಸಭಾ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಇ ಖಾತೆ ಬಿ ಖಾತೆ ಸಮರ್ಪಕವಾಗಿ ಮಾಡುವ ಜವಾಬ್ದಾರಿ ನನಗಿದೆ. ಕುಣಿಗಲ್ ಗೆ ಬೇಕಾದ ಎಲ್ಲಾ ಅನುದಾನಗಳನ್ನು ನಾನು ತರುತ್ತೇನೆ ನನಗೆ ಯಾವುದೇ ಬಜೆಟ್ ನ ಅವಶ್ಯಕತೆ ಇಲ್ಲ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದರು.
ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಮಂಜುಳಾ ನಾಗರಾಜು ಕುಣಿಗಲ್ ಪಟ್ಟಣದಲ್ಲಿ ಬಡವರು ಸೇರಿದಂತೆ ಜನಸಾಮಾನ್ಯರ ಕೆಲಸಗಳನ್ನು ಮಾಡುವುದರ ಜೊತೆಗೆ ಕುಡಿಯುವ ನೀರು ಸ್ವಚ್ಛತೆ ಇವುಗಳನ್ನು ಗಮನಹರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ ಗೌತಮ್ ಕುಮಾರ್ ಪುರಸಭೆ ಮುಖ್ಯ ಅಧಿಕಾರಿ ಮಂಜುಳಾ ಹಾಗೂ ಪುರಸಭಾ ಸದಸ್ಯರು ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.ಚುನಾವಣೆ ನಂತರ ಕುಣಿಗಲ್ ಪಟ್ಟಣದ ಪುರಸಭಾ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಘೋಷಣೆಗಳನ್ನು ಕೂಗಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.