ಸೊಳ್ಳೇಪುರ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಮಂಜುನಾಥ್‌ ಹೊಸ ಸಾರಥಿ

| Published : Jul 15 2024, 01:49 AM IST

ಸೊಳ್ಳೇಪುರ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಮಂಜುನಾಥ್‌ ಹೊಸ ಸಾರಥಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂಘ ಗ್ರಾಮೀಣ ಪ್ರದೇಶದಲ್ಲಿದೆ. ಸುಮಾರು 1300 ಷೇರುದಾರರಿದ್ದು ವಾರ್ಷಿಕ ವಹಿವಾಟು 5.5 ಕೋಟಿ ರು.ಗಳಿದೆ. 3.5 ಲಕ್ಷ ರು.ಗಳಷ್ಟು ಆದಾಯವಿದೆ. ರೈತರಿಗೆ ಬೆಳೆ ಸಾಲ, ಮಹಿಳಾ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಮತ್ತಷ್ಟು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸೊಳ್ಳೇಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೋಡಿಮಾರನಹಳ್ಳಿ ಮಂಜುನಾಥ್‌ ಅವಿರೋಧವಾಗಿ ಆಯ್ಕೆಯಾದರು.

11 ನಿರ್ದೇಶಕರಿರುವ ಸಂಘದಲ್ಲಿ ಹಿಂದಿನ ಅಧ್ಯಕ್ಷೆ ಪದ್ಮಮ್ಮ ಬೋರೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕೋಡಿಮಾರನಹಳ್ಳಿ ಮಂಜುನಾಥ್ ಹೊರತು ಪಡಿಸಿ ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಭರತ್‌ಕುಮಾರ್ ಘೋಷಿಸಿದರು.

ನೂತನ ಅಧ್ಯಕ್ಷ ಕೋಡಿಮಾರನಹಳ್ಳಿ ಮಂಜುನಾಥ್ ಮಾತನಾಡಿ, ತಮ್ಮ ಸಂಘ ಗ್ರಾಮೀಣ ಪ್ರದೇಶದಲ್ಲಿದೆ. ಸುಮಾರು 1300 ಷೇರುದಾರರಿದ್ದು ವಾರ್ಷಿಕ ವಹಿವಾಟು 5.5 ಕೋಟಿ ರು.ಗಳಿದೆ. 3.5 ಲಕ್ಷ ರು.ಗಳಷ್ಟು ಆದಾಯವಿದೆ. ರೈತರಿಗೆ ಬೆಳೆ ಸಾಲ, ಮಹಿಳಾ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಮತ್ತಷ್ಟು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನೂತನ ಅಧ್ಯಕ್ಷರ ಹಿತೈಷಿಗಳು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಿರ್ದೇಶಕರಾದ ಕಿಶೋರ್‌ಕುಮಾರ್, ಮಂಜಪ್ಪ, ರಾಜೇಗೌಡ, ಜಗದೀಶ್, ಪದ್ಮಮ್ಮ, ಪ್ರವೀಣ್‌ಕುಮಾರ್, ವೆಂಕಟರಮಣ, ಮುಖಂಡರಾದ ಕೋಡಿಮಾರನಹಳ್ಳಿ ಮಂಜೇಗೌಡ, ನಂಜುಂಡೇಗೌಡ, ಶಂಕರ, ಕಂಬೇಗೌಡ, ಚೇತನಕುಮಾರ್, ಬಲರಾಮ್, ಸಿಇಒ ಮಂಜೇಗೌಡಇದ್ದರು.

ಡೆಂಘೀ ಜ್ವರದ ಬಗ್ಗೆ ಜಾಗೃತಿದೇವಲಾಪುರ: ಡೆಂಘೀ ಜ್ವರ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನಕ್ಕೆ ವೈದ್ಯಾಧಿಕಾರಿ ಡಾ. ಚೇತನ್ ಚಾಲನೆ ನೀಡಿದರು. ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಜೊತೆಗೂಡಿ ಡೆಂಘೀ ಹಾಗೂ ಇತರ ರೋಗಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಆಂದೋಲನದಲ್ಲಿ ಮಾತನಾಡಿದರು.ಸಾರ್ವಜನಿಕರು ಡೆಂಘೀ ಜ್ವರ ಹರಡುವ ಈಡೀಸ್ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ತೊಟ್ಟಿ, ಡ್ರಮ್, ಬ್ಯಾರಲ್, ಫ್ರಿಡ್ಜ್, ಹೂ ಕುಂಡ, ಟ್ಯಾಂಕಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ ಪುನಃ ನೀರು ತುಂಬಿಸಿ ಎಂದರು. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಉಪಯೋಗಿಸಿ ನೀರಿನ ಶೇಖರಣೆಗಳನ್ನು ಮುಚ್ಚಿಡಿ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಪರಿಸರವನ್ನು ಸ್ವಚ್ಛವಾಗಿಡಟ್ಟು ಸೊಳ್ಳೆಗಳಿಂದ ಡೆಂಘೀ, ಚಿಕೂನ್ ಗುನ್ಯಾ, ಝೀಕಾ, ಮೆದುಳು ಜ್ವರ, ಮಲೇರಿಯಾ, ಆನೆಕಾಲು ರೋಗ ಇವುಗಳನ್ನು ತಡೆಗಟ್ಟಿ ಎಂದು ಕರೆ ನೀಡಿದರು.

ಡೆಂಘೀ ಜಾಗೃತಿ ಅಭಿಯಾನಕ್ಕೆ ಗ್ರಾಪಂ ಗೋವಿಂದು ಚಾಲನೆ ನೀಡಿದರು. ಗ್ರಾಪಂ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಭಿಯಾನ ಡೆಂಘೀ ಬಗ್ಗೆ ಹಾಡಿನ ಮೂಲಕ ಅರಿವು ಮೂಡಿಸುವ ಜಾಥಾ ನಡೆಸಲಾಯಿತು.