ಸಾರಾಂಶ
ಕಾರಟಗಿ: ಆರ್ಥಿಕ ಕುಸಿತದ ಭೀತಿಯಲ್ಲಿದ್ದ ದೇಶವನ್ನು ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಕ್ಕೆ ತೆರೆಯುವ ಮೂಲಕ ಇಡೀ ಎಲ್ಲ ಸ್ಥರಗಳಲ್ಲಿಯೂ ಮೇಲೆಕ್ಕೆತ್ತಿದರು. ಆ ಮೂಲಕ ನವ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿಯಾಗಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಮನಮೋಹನಸಿಂಗ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು."ಭಾರತದ ಹದಿನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ಒಂದು ದಶಕದ ಆರ್ಥಿಕತೆಯ ಬೆಳವಣಿಗೆ ಮತ್ತು ಅಭಿವೃದ್ಧಿಯ ನೇತೃತ್ವ ವಹಿಸಿದ್ದರು. ನಾಗರಿಕರಿಗೆ ಆಹಾರದ ಭದ್ರತೆ, ಶಿಕ್ಷಣದ ಹಕ್ಕು, ಕೆಲಸ ಮಾಡುವ ಹಕ್ಕು ಮತ್ತು ಮಾಹಿತಿ ಹಕ್ಕುಗಳನ್ನು ಖಾತ್ರಿಪಡಿಸುವ ಮಸೂದೆಗಳನ್ನು ಅಂಗೀಕರಿಸಿದ ಅವರ ಯೋಜನೆ ರಾಜಕೀಯದಲ್ಲಿ ಹೊಸ ಯುಗವನ್ನು ಸೃಷ್ಟಿಸಿತು ಎಂದರು.ಅವರು ಕಠಿಣ ಪರಿಶ್ರಮ ಮತ್ತು ವಿನಮ್ರ ಹಾಗೂ ಮೃದುವಾಗಿ ಮಾತನಾಡುವ ವರ್ತನೆಗೆ ಹೆಸರುವಾಸಿ. ಇಂಥ ವ್ಯಕ್ತಿ ನಿಧನದಿಂದ ಕಾಂಗ್ರೆಸ್‌ಗೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲೀಪಾಟೀಲ್, ಮುಖಂಡರಾದ ಚನ್ನಬಸಪ್ಪ ಸುಂಕದ, ಶರಣಪ್ಪ ಪರಕಿ ಅವರು ಮಾಜಿ ಪ್ರಧಾನಿ ಮನಮೋಹನಸಿಂಗ್ ಕೊಡುಗೆ ಸ್ಮರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ಶರಣಪ್ಪ ಸಾಹುಕಾರ, ಖಾಜಾ ಹುಸೇನ್ ಮುಲ್ಲಾ, ಬೂದಿ ಗಿರಿಯಪ್ಪ, ಶಿವರಾಜ ಬೆನ್ನೂರು, ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಮಂಜುನಾಥ್ ಮೇಗೂರು, ಸುರೇಶ ಕೊರವರ್, ಸೋಮಶೇಖರ ಗ್ಯಾರೇಜ್, ಲಿಂಗಪ್ಪ ಗಿಣಿವಾರ, ತುಳಜರಾಮ್ ಸಿಂಗ್ರಿ, ಬಸವರಾಜ ಅರಳಿ ಸೇರಿದಂತೆ ಇನ್ನಿತರರು ಇದ್ದರು.