ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ನಾರಾಯಣಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆರಂಭಗೊಂಡ ಬಿಎಂಸಿ ಘಟಕಕ್ಕೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಡೈರಿಗಳು ದೇವಸ್ಥಾನ ಇದ್ದಂತೆ, ರಾಜಕೀಯ ಬದಿಗೊತ್ತಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಅವ್ಯವಹಾರ ನಡೆಸದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಮನ್ಮುಲ್ ಒಕ್ಕೂಟದ ಹಾಲನ್ನು ಹೊರ ರಾಜ್ಯಗಳಲ್ಲೂ ಮಾರಾಟ ಮಾಡುತ್ತಿದೆ. ಪ್ರಸ್ತುತ ಒಕ್ಕೂಟಕ್ಕೆ 121 ಲಕ್ಷಕ್ಕೂ ಅಧಿಕ ಹಾಲು ಪೂರೈಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ನಾನು ನಿರ್ದೇಶಕನಾದ ಬಳಿಕ ತಾಲೂಕಿನಲ್ಲಿ ಇರುವ ಎಲ್ಲಾ ಸಹಕಾರ ಸಂಘಗಳಿಗೂ ಭೇಟಿಕೊಟ್ಟಿದೆ. ಬಹುತೇಕ ಸಹಕಾರ ಸಂಘಗಳು ಲಾಭದಾಯಕವಾಗಿ ನಡೆಯುತ್ತಿವೆ. ಆದರೆ, ನಾರಾಯಣಪುರ ಸಂಘವು ನಷ್ಟದಲ್ಲಿ ನಡೆಯುತ್ತಿದೆ. ಮುಂದಿನ ವರ್ಷದೊಳಗೆ ಸಂಘವನ್ನು ಲಾಭದಾಯಕವಾಗಿ ನಡೆಸಬೇಕು. ಮುಂದಿನ ದಿನಗಳಲ್ಲಿ ಡೈರಿ ಮೇಲಂತಸ್ಥು ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.


ಕಾರ್ಯಕ್ರಮದ ಬಳಿಕ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಡೈರಿಗೆ ತೆರಳಿ ಶುಭಕೋರಿದರು. ಈ ವೇಳೆ ಮಾರ್ಗ ವಿಸ್ತರಣಾಧಿಕಾರಿಗಳಾದ ಪ್ರಜ್ವಲ್, ನಾಗೇಂದ್ರ, ಡಾ.ಸಂತೋಷ್, ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಕೋಡಾಲ ರಾಧಾಕೃಷ್ಣ, ಡೈರಿ ಅಧ್ಯಕ್ಷ ಮರೀಗೌಡ, ಉಪಾಧ್ಯಕ್ಷೆ ನಯನ, ನಿರ್ದೇಶಕರಾದ ಕೃಷ್ಣೇಗೌಡ, ಯೋಗೇಶ್, ರವಿ, ಸೋಮು, ಎನ್.ಬಿ.ಅನಿಲ್‌ ಕುಮಾರ್, ಎನ್.ಜಿ.ದಯಾನಂದ್, ಮಂಜುಳ, ಶಾರದಮ್ಮ, ರಾಧಮ್ಮ, ರೇಖಾ, ಕಾರ್‍ಯದರ್ಶಿ ಎನ್.ಎಸ್.ರಘುಕುಮಾರ್, ಮುಖಂಡರಾದ ಪುಟ್ಟೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಮಾರ್, ಹನುಮೇಗೌಡ, ಸ್ವಾಮಿ, ಬೋರಲಿಂಗಯ್ಯ, ಚಿನಕುರಳಿ ರಮೇಶ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.