ಮನ್‌ಮುಲ್ ಚುನಾವಣೆ: ೩೪ ಅಭ್ಯರ್ಥಿಗಳಿಂದ ೫೪ ನಾಮಪತ್ರ

| Published : Jan 26 2025, 01:32 AM IST

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜಿಲ್ಲೆಯಿಂದ ಒಟ್ಟು ೩೪ ಅಭ್ಯರ್ಥಿಗಳು ೫೪ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಬಹುತೇಕ ಹಳಬರೇ ಹೆಚ್ಚಿನ ಸಂಖ್ಯೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜೊತೆಗೆ ಮೂವರು ಮಹಿಳೆಯರು ಕಣದಲ್ಲಿರುವುದು ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜಿಲ್ಲೆಯಿಂದ ಒಟ್ಟು ೩೪ ಅಭ್ಯರ್ಥಿಗಳು ೫೪ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಬಹುತೇಕ ಹಳಬರೇ ಹೆಚ್ಚಿನ ಸಂಖ್ಯೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜೊತೆಗೆ ಮೂವರು ಮಹಿಳೆಯರು ಕಣದಲ್ಲಿರುವುದು ವಿಶೇಷವಾಗಿದೆ.

ಫೆ.೨ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಭಾನುವಾರ (ಜ.೨೬) ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಂಡ್ಯದಿಂದ ೮ ಅಭ್ಯರ್ಥಿಗಳು, ಮದ್ದೂರು-೮, ಮಳವಳ್ಳಿ-೩, ಪಾಂಡವಪುರ-೩, ಶ್ರೀರಂಗಪಟ್ಟಣ-೩, ಕೆ.ಆರ್.ಪೇಟೆ-೫ ಹಾಗೂ ನಾಗಮಂಗಲದಿಂದ ೪ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮನ್‌ಮುಲ್‌ಗೆ ಆಯ್ಕೆಯಾಗಿದ್ದ ಮಳವಳ್ಳಿ ತಾಲೂಕಿನ ವಿ.ಎಂ.ವಿಶ್ವನಾಥ, ಶ್ರೀರಂಗಪಟ್ಟಣದಿಂದ ಬಿ.ಬೊರೇಗೌಡ, ಪಾಂಡವಪುರ ತಾಲೂಕಿನಿಂದ ಕೆ.ರಾಮಚಂದ್ರ, ಕೆ.ಆರ್.ಪೇಟೆ ತಾಲೂಕಿನಿಂದ ಎಂ.ಬಿ.ಹರೀಶ್, ಕೆ.ರವಿ, ಎಚ್.ಟಿ.ಮಂಜು, ಮಂಡ್ಯ ತಾಲೂಕಿನಿಂದ ಯು.ಸಿ.ಶಿವಕುಮಾರ್, ಬಿ.ಚಂದ್ರ, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರ, ಮದ್ದೂರು ತಾಲೂಕಿನಿಂದ ಎಸ್.ಪಿ.ಸ್ವಾಮಿ, ಎಂ.ರೂಪಾ, ಕದಲೂರು ರಾಮಕೃಷ್ಣ, ನಾಗಮಂಗಲ ತಾಲೂಕಿನಿಂದ ಎನ್.ಬಾಲಕೃಷ್ಣ (ನೆಲ್ಲೀಗೆರೆ ಬಾಲು) ಸೇರಿದಂತೆ ೧೪ ಮಂದಿ ಪುನರಾಯ್ಕೆ ಬಯಸಿ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ.

ನಾಗಮಂಗಲ ತಾಲೂಕಿನಿಂದ ಮನ್‌ಮುಲ್‌ಗೆ ಆಯ್ಕೆಯಾಗಿದ್ದ ನೆಲ್ಲೀಗೆರೆ ಬಾಲು ನಿರ್ದೇಶಕ ಸ್ಥಾನ ವಜಾಗೊಂಡ ಬಳಿಕ ಸರ್ಕಾರದಿಂದ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದ ಎಸ್.ಎನ್.ಲಕ್ಷ್ಮೀನಾರಾಯಣ ಮತ್ತೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು:

ಮಂಡ್ಯ ತಾಲೂಕು: ಯು.ಸಿ.ಶಿವಕುಮಾರ್, ಬಿ.ಚಂದ್ರ, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರ, ವಿಜಯಕುಮಾರ್, ಎಚ್.ಎಸ್.ಮಧು, ಕೆಎ.ರಾಜು, ಜಿ.ಎಸ್.ಪುಷ್ಪಾವತಿ.

ಮದ್ದೂರು ತಾಲೂಕು: ಎಸ್.ಪಿ.ಸ್ವಾಮಿ, ಎಂ.ರೂಪಾ, ಎಂ.ಕೆ.ಹರೀಶ್‌ಬಾಬು, ಸಿ..ಚಲುವರಾಜು, ರಾಮಕೃಷ್ಣ, ಎಸ್.ಮಹೇಶ್, ಎಸ್.ಟಿ.ಪ್ರಕಾಶ್‌ಗೌಡ, ಬಿ.ಅನಿಲ್‌ಕುಮಾರ್.

ಮಳವಳ್ಳಿ ತಾಲೂಕು: ವಿ.ಎಂ.ವಿಶ್ವನಾಥ, ಡಿ.ಕೃಷ್ಣೇಗೌಡ, ಜಿ.ಎಂ.ವಿಷಕಂಠೇಗೌಡ.

ಶ್ರೀರಂಗಪಟ್ಟಣ ತಾಲೂಕು: ಬಿ.ಬೋರೇಗೌಡ, ಎಚ್.ಎಂ.ಪುಟ್ಟಸ್ವಾಮಿಗೌಡ ಎಂ.ಕಿಶೋರ್ (ಕಿರಣ್).

ಪಾಂಡವಪುರ ತಾಲೂಕು: ಸಿ.ಶಿವಕುಮಾರ್, ಕೆ.ರಾಮಚಂದ್ರ, ಜಿ.ಈ.ರವಿಕುಮಾರ.

ಕೆ.ಆರ್.ಪೇಟೆ ತಾಲೂಕು: ಎಂ.ಬಿ.ಹರೀಶಶ್, ಕೆ.ರವಿ, ಎಚ್.ಟಿ.ಮಂಜು, ಎನ್.ಎಸ್.ಮಹೇಶ, ಎ.ಎಸ್.ಕಲ್ಪನ

ನಾಗಮಂಗಲ ತಾಲೂಕು: ಎಸ್.ಎನ್.ಲಕ್ಷ್ಮೀನಾರಾಯಣ, ಎನ್.ಅಪ್ಪಾಜಿಗೌಡ, ಎನ್.ಬಾಲಕೃಷ್ಣ (ನೆಲ್ಲೀಗೆರೆ ಬಾಲು), ಎನ್.ಎಂ.ದೇವೇಗೌಡ.