ವಿಜಯಪುರ ನಗರದ ಮನೋಲಯ ಆಸ್ಪತ್ರೆಯಲ್ಲಿ ಮನೋತ್ಸವ-09ರ ಅಂಗವಾಗಿ ನಿಮ್ಮ ಒಂದು ರಕ್ತದ ಹನಿ ಇನ್ನೊಂದು ಜೀವಕ್ಕೆ ಸಂಜೀವಿನಿ ಎಂಬ ಘೋಷವಾಕ್ಯದಡಿಯಲ್ಲಿ ಸ್ವಯಂ ಪ್ರೇರಿತ ಮಹಾರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಧಮ೯ದಶಿ೯ ಶಂಕರಗೌಡ ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮನೋಲಯದ ಸಮಾಜಮುಖಿ ಕಾಯ೯ಗಳು ಇನ್ನೂ ವಿಸ್ತಾರವಾಗಲಿ. ಪ್ರತಿ ಮನೆ, ಮನಕ್ಕೂ ತಲುಪಲಿ ಎಂದು ಯರನಾಳ ರೇವಣಸಿದ್ದೇಶ್ವರ ದೇವಸ್ಥಾನದ ಧಮ೯ದಶಿ೯ ಶಂಕರಗೌಡ ಪಾಟೀಲ ಶುಭ ಹಾರೈಸಿದರು.

ನಗರದ ಮನೋಲಯ ಆಸ್ಪತ್ರೆಯಲ್ಲಿ ಮನೋತ್ಸವ-09ರ ಅಂಗವಾಗಿ ನಿಮ್ಮ ಒಂದು ರಕ್ತದ ಹನಿ ಇನ್ನೊಂದು ಜೀವಕ್ಕೆ ಸಂಜೀವಿನಿ ಎಂಬ ಘೋಷವಾಕ್ಯದಡಿಯಲ್ಲಿ ಸ್ವಯಂ ಪ್ರೇರಿತ ಮಹಾರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನೋಲಯ ಆಸ್ಪತ್ರೆಯ ಸಂಸ್ಥಾಪಕ ಮುಖ್ಯಸ್ಥ ಡಾ.ಮನೋವಿಜಯ ಬ.ಕಳಸಗೊಂಡ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೋತ್ಸವದ ಯಶಸ್ಸು ಒಬ್ಬರಿಂದಲ್ಲ, ನಿಮ್ಮೆಲ್ಲರಿಂದ ಸಾಧ್ಯ ಎಂದರು.

ವಿಜಯಪುರ ಟ್ರಾಫಿಕ್ ಪೊಲೀಸ್ ಸ್ಟೆಷನ್‌ನ ಅಸ್ಸಿಸ್ಟಂಟ್ ಸಬ್‌ಇನ್‌ಸ್ಪೆಕ್ಟರ್‌ ಶೀಲಾ ಪಾಟೀಲ ಮಾತನಾಡಿ, ಮನ ಮನದ ಮಾನಸಿಕ ಆರೋಗ್ಯ ಜಾಗೃತಿಗಾಗಿ ಮನೆ, ಮನೆಗೂ ಮನೋಲಯ ಮಹಾ ಆರೋಗ್ಯ ಜಾಗೃತಿ ಅಭಿಯಾನವನ್ನು ಶ್ಲಾಘಿಸಿದರು.

ಬಿಎಲ್‌ಡಿಇ ರಕ್ತ ನಿಧಿಯ ಮುಖ್ಯಸ್ಥ ಡಾ.ಸತೀಷ ಅರಕೇರಿ ಅವರು ರಕ್ತ ದಾನದಿಂದ ಆರೋಗ್ಯದಿಂದಾಗು ಲಾಭಗಳ ಬಗ್ಗೆ ವಿವರಿಸಿದರು.

ಸಾರವಾಡದ ಅಜ್ಜಿ ಖಾನಾವಳಿಯ ಸಂಸ್ಥಾಪಕ ಮುಖ್ಯಸ್ಥೆ ಅನುಸೂಯ ಮ.ಹಿಟ್ನಲ್ಲಿ ಅವರಿಗೆ ಸನ್ಮಾನಿಸಲಾಯಿತು.

ಕಾಯ೯ಕ್ರಮದಲ್ಲಿ ಮನೋಲಯ ಸೊಸೈಟಿ ಕಾಯ೯ದಶಿ೯ ಹಾಗೂ ಚಿಕ್ಕಮಕ್ಕಳ ತಜ್ಞ ಡಾ.ಸದಾಶಿವ ಉಕ್ಕಲಿ ಸೇರಿದಂತೆ ಮನೋಲಯದ ಸರ್ವ ಸಿಬಂದಿ, ಮನೋಲಯದ ಕುಟುಂಬ ಹಾಗೂ ಗೆಳೆಯರ ಬಳಗ, ಬಿಎಲ್‌ಡಿಇ ರಕ್ತ ನಿಧಿ ಸಿಬ್ಬಂದಿ ಉಪಸ್ಥಿತರಿದ್ದರು. ಸ್ವಯಂ ಪ್ರೇರಿತ ಮಹಾ ರಕ್ತದಾನ ಶಿಬಿರದಲ್ಲಿ ಸುಮಾರು 35ಕ್ಕೂ ಹೆಚ್ಚು ಆಸಕ್ತರು ರಕ್ತದಾನ ಮಾಡಿದರು.