ಸಾರಾಂಶ
ಮಾನವೀಯತೆಯ ಸ್ಪರ್ಷದ ಮೂಲಕ ರೋಗಿಗಳ ಸೇವೆ ಮಾಡುತ್ತಿರುವ ಮಣೂರ್ ಆಸ್ಪತ್ರೆಯ ಸೇವೆ ಅನನ್ಯವಾದುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಗುಣಮಟ್ಟದ ಚಿಕಿತ್ಸೆಯನ್ನು ಮಾನವೀಯತೆಯ ಸ್ಪರ್ಷದ ಮೂಲಕ ರೋಗಿಗಳ ಸೇವೆ ಮಾಡುತ್ತಿರುವ ಮಣೂರ್ ಆಸ್ಪತ್ರೆಯ ಸೇವೆ ಅನನ್ಯವಾದುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.ನಗರದ ರಿಂಗ್ ರಸ್ತೆಯಲ್ಲಿರುವ ಮಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಾಲ್ಕನೆಯ ವರ್ಷದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವ ಅಳವಡಿಸಿಕೊಂಡು ವೈದ್ಯರಾಗಿ ರೋಗಿಗಳ ಸೇವೆ ಮಾಡುತ್ತಿರುವ ಡಾ.ಫಾರೂಕ್ ಮಣೂರ್ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ಪುಸ್ತಕ ಒದಗಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಆಸ್ಪತ್ರೆಯ ಮ್ಯಾನೆಜಿಂಗ್ ಡೈರೆಕ್ಟರ್ ಡಾ.ಫಾರೂಕ್ ಮಣೂರು ಮಾತನಾಡಿ, ಮಣೂರು ಆಸ್ಪತ್ರೆ ಈಗ ನಾಲ್ಕನೆ ವರ್ಷಕ್ಕೆ ಕಾಲಿಡುತ್ತಿದೆ. ಬಡವರ ಹಾಗೂ ಮಧ್ಯಮ ವರ್ಗದವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಆಸ್ಪತ್ರೆಯ ಯಶಸ್ಸಿನ ಹಿಂದೆ ನಮ್ಮ ಸಿಬ್ಬಂದಿ ವರ್ಗದ ಹಾಗೂ ವೈದ್ಯರ ಪರಿಶ್ರಮವಿದೆ ಎಂದರು.ಇದೇ ಸಂದರ್ಭದಲ್ಲಿ 16 ವರ್ಷ ಒಳಗಿನ ಟೆನ್ನಿಸ್‌ನಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ರಘು ಎನ್ನುವ ಸ್ಪರ್ಧಾಳುವಿಗೆ ರು.1.20 ಲಕ್ಷ ಮೊತ್ತದ ಪ್ರೋತ್ಸಾಹ ಧನದ ಚೆಕ್, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿರುವ ೫೦ ಅಭ್ಯರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ಮಣೂರ್ ಆಸ್ಪತ್ರೆಯ ಕುರಿತಂತೆ ‘ದಿ ವೆಲ್ ನೆಸ್ ರೆವೋಲುಷನ್’ ಎನ್ನುವ ಮ್ಯಾಗ್‌ಜಿನ್ ಲೋಕಾರ್ಪಣೆ ಮಾಡಲಾಯಿತು.ಚಿಂಚೋಳಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ, ಶಾಸಕಿ ಕನೀಜ್ ಫಾತೀಮಾ, ಸುಭಾಷ್ ರಾಠೋಡ, ಅರವಿಂದ ಚೌವಾಣ್, ಕಿರಣ್ ದೇಶಮುಖ್, ಬಾಬುಮಿಯ್ಯ ಮನ್ನೂರ, ಮಸೂದ್ ಅಲ್ ಹಸನ್,ಮಜರ್ ಹುಸೇನ್, ಅಜ್ಮಲ್ ಗೋಲಾ, ಫರಾಜುಲ್ ಇಸ್ಲಾಮ್, ಶಂಶೀರ್ ಇದ್ದರು.