ಮಂಟೂರ ಏತ ನೀರಾವರಿ ಯೋಜನೆಗೆ ಇಂದು ಚಾಲನೆ

| Published : Feb 04 2024, 01:33 AM IST / Updated: Feb 04 2024, 01:34 AM IST

ಮಂಟೂರ ಏತ ನೀರಾವರಿ ಯೋಜನೆಗೆ ಇಂದು ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀಳಗಿ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬೀಳಗಿ ಮತಕ್ಷೇತ್ರವೇನು ಹೊರತಾಗಿಲ್ಲ. ಹೀಗಾಗಿ ಕ್ಷೇತ್ರದಾದ್ಯಂತ ಕೊಳವೆಬಾವಿಗಳು, ಕೆರೆ, ಹಳ್ಳ, ಕೊಳ್ಳಗಳು ಬತ್ತುತ್ತಿವೆ. ಅವುಗಳಿಗೆ ಪುನರುಜ್ಜೀವನ ನೀಡಲು ಮಂಟೂರ ಏತ ನೀರಾವರಿಯಿಂದ ಘಟಪ್ರಭಾ ಎಡದಂಡೆ ಕಾಲುವೆಗಳ ಮೂಲಕ ಫೆ.4 ರಿಂದ 10 ದಿನಗಳ ಕಾಲ ನೀರು ಹರಿಸುವ ಕಾರ್ಯಕ್ಕೆ ಫೆ.4ರಂದು ಬೆಳಗ್ಗೆ 10 ಗಂಟೆಗೆ ಗಲಗಲಿ ಬ್ಯಾರೇಜ್‌ ಬಳಿ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗವಹಿಸಲಿದ್ದಾರೆ ಎಂದು ಎಂದು ಶಾಸಕ ಜೆ.ಟಿ. ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬೀಳಗಿ ಮತಕ್ಷೇತ್ರವೇನು ಹೊರತಾಗಿಲ್ಲ. ಹೀಗಾಗಿ ಕ್ಷೇತ್ರದಾದ್ಯಂತ ಕೊಳವೆಬಾವಿಗಳು, ಕೆರೆ, ಹಳ್ಳ, ಕೊಳ್ಳಗಳು ಬತ್ತುತ್ತಿವೆ. ಅವುಗಳಿಗೆ ಪುನರುಜ್ಜೀವನ ನೀಡಲು ಮಂಟೂರ ಏತ ನೀರಾವರಿಯಿಂದ ಘಟಪ್ರಭಾ ಎಡದಂಡೆ ಕಾಲುವೆಗಳ ಮೂಲಕ ಫೆ.4 ರಿಂದ 10 ದಿನಗಳ ಕಾಲ ನೀರು ಹರಿಸುವ ಕಾರ್ಯಕ್ಕೆ ಫೆ.4ರಂದು ಬೆಳಗ್ಗೆ 10 ಗಂಟೆಗೆ ಗಲಗಲಿ ಬ್ಯಾರೇಜ್‌ ಬಳಿ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗವಹಿಸಲಿದ್ದಾರೆ ಎಂದು ಎಂದು ಶಾಸಕ ಜೆ.ಟಿ. ಪಾಟೀಲ್ ಹೇಳಿದರು.

ಪಟ್ಟಣದ ಸಿದ್ದೇಶ್ವರ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಘಟಪ್ರಭಾ ಎಡದಂಡೆ ಕಾಲುವೆಗಳ ಮೂಲಕ ನೀರು ಹರಿಸುವುದರಿಂದ ಕುಡಿಯುವ ನೀರು ಜೊತೆಗೆ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿ ಆಗುವುದಲ್ಲದೆ ಕೊಳವೆ ಬಾವಿಗಳು ಪುನರ್‌ಭರ್ತಿಯಾಗಲು, ಖಾಲಿಯಾದ ಕೆರೆ ತುಂಬಿಸಿಕೊಳ್ಳಲು ಅನುಕೂಲಕರವಾಗಲಿದೆ. ಇದರಿಂದ ಬೇಸಿಗೆ ಕಾಲದಲ್ಲಾಗುವ ನೀರಿನ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವರಿಕೆ ಮಾಡಿದ್ದರಿಂದ ಅವರು ಪ್ರಾದೇಶಿಕ ಆಯುಕ್ತರಿಗೆ ಕರೆ ಮಾಡಿ ಮಾತನಾಡಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಸಂಸದ ಡಿ.ಕೆ. ಸುರೇಶ್‌ ಅವರು ನೀಡಿರುವ ದೇಶ ವಿಭಜನೆ ಮಾತು ಅವರಿಗೆ ಶೋಭೆ ತರುವುದಿಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯಕ್ಕೆ ತಾರತಮ್ಯವಾಗುತ್ತಿರುವುದು ಸತ್ಯ. ಈ ಕುರಿತು ಫೆ.7ರಂದು ದೆಹಲಿಯಲ್ಲಿ ಹಮ್ಮಿಕೊಂಡ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಶಾಸಕ ಜೆ.ಟಿ. ಪಾಟೀಲ್‌ ತಿಳಿಸಿದರು.

ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಹಣಮಂತ ಕಾಖಂಡಕಿ, ಮಲ್ಲಪ್ಪ ಕಾಳಗಿ, ನಗರ ಘಟಕದ ಅಧ್ಯಕ್ಷ ಸಿದ್ದು ಸಾರಾವರಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಅನವೀರಯ್ಯ ಪ್ಯಾಟಿಮಠ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಯಮನಪ್ಪ ರೊಳ್ಳಿ,ಶಿವಾನಂದ ಮಾದರ, ರಾಜು ಬೋರ್ಜಿ ಸೇರಿದಂತೆ ಇತರರು ಇದ್ದರು.