ಸಾರಾಂಶ
ಭಗವಂತನ ಸಾನ್ನಿಧ್ಯದಲ್ಲಿ ಇರುವುದೆ ಉಪವಾಸ. ಭಕ್ತಿಗೆ ಭಗವಂತನ ಅನುಗ್ರಹವಾಗುತ್ತದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಭಗವಂತನ ಸಾನ್ನಿಧ್ಯದಲ್ಲಿ ಇರುವುದೆ ಉಪವಾಸ. ಭಕ್ತಿಗೆ ಭಗವಂತನ ಅನುಗ್ರಹವಾಗುತ್ತದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.ಇಲ್ಲಿನ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ 17ನೇ ಜಾತ್ರಾಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇವರು ಬ್ರಹ್ಮಾಂಡದ ಎಲ್ಲೆಡೆ ಇದ್ದಾರೆ. ನೀವು ಇದ್ದಲ್ಲೆ ಧ್ಯಾನ ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗಿರಿ ಎಂದರು. ಉಪವಾಸ ಎಲ್ಲ ಧರ್ಮದಲ್ಲಿದ್ದೂ ಇದರಿಂದ ಮನಸ್ಸಿನ ಏಕಾಗ್ರತೆಯೊಂದಿಗೆ ಆರೋಗ್ಯ ವೃದ್ಧಿಯಾಗುತ್ತದೆ. ಓಂ ನಮಃ ಶಿವಾಯ ಎಂಬ ರಾಜ ಮಂತ್ರವನ್ನು ಜಪಿಸಿದರೆ ಆತ್ಮಬಲ ಹಾಗೂ ಆರೋಗ್ಯವೃದ್ಧಿಯಾಗುತ್ತದೆ. ದೇವಸ್ಥಾನಗಳು ನಮ್ಮ ಸಂಸ್ಕೃತಿ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ನಾವೆಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ಹೆಚ್ಚೆಚ್ಚು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಿ ಈ ಪರಂಪರೆ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋಣ ಎಂದರು.
ವೇದಿಕೆಯಲ್ಲಿ ರಾಜ್ಯ ಬಾಲವಿಕಾಸ ಅಕಾಡೆಮಿ ನಿರ್ದೇಶಕ ಗಜಾನನ ಮನ್ನಿಕೇರಿ, ಮಹಾಂತೇಶ ತಾಂವಶಿ, ಶಿವಾನಂದ ಹತ್ತಿ, ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿ ಪ್ರೇಮಲತಾ ಕಡಗದ, ಕಿರಣ ಗೋಣಿ, ಅಮರಗುಂಡಪ್ಪ ಬಿಜ್ಜಳ, ಉದಯ ಬನ್ನಿಶೆಟ್ಟಿ, ಭೀಮಪ್ಪ ಗೋಲಭಾಂವಿ, ಸುನಂದಾ ಮನ್ನಿಕೇರಿ, ಉಮಾದೇವಿ ಹಿರೇಮಠ, ಜಗದೇವಿ ಬೋಸಗಾ, ಸುಶ್ಮೀತಾ ಶೆಟ್ಟಿ, ಶಿವಶಂಕರ ದಾಸಪ್ಪನವರ, ಮಾರುತಿ ಬಡಿಗೇರ ಸೇರಿದಂತೆ ಅನೇಕರು ಇದ್ದರು. ಕುಮಾರ ಕೊಲ್ಹಾಪೂರ ಸ್ವಾಗತಿಸಿ, ಶೈಲಾ ಕೊಕ್ಕರಿ ನಿರೂಪಿಸಿ ವಂದಿಸಿದರು. ಕೈ.ವಾ ಪತ್ರೇಪ್ಪಾ ಹಾಗೂ ಲಕ್ಕವ್ವಾ ಬನ್ನಿಶೆಟ್ಟಿ ಸ್ಮರಣಾರ್ಥ ವಕೀಲ ಉದಯ ಬನ್ನಿಶೆಟ್ಟಿಯಿಂದ ಮಹಾಪ್ರಸಾದ ನಡೆಯಿತು.