ಸಾರಾಂಶ
ಗೋಕಾಕದ ವಿದ್ಯಾ ಸೋಮಶೇಖರ್ ಮಗದುಂ ಹಾಗೂ ಜೆಎಸ್‌ಎಸ್ ಲಲಿತಕಲಾ ತಂಡದವರು ಪ್ರಾರ್ಥನೆ ಮತ್ತು ವಚನ ಗಾಯನ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ 22ನೇ ಪೀಠಾಧಿಪತಿ ಮಂತ್ರಮಹರ್ಷಿ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳವರ 140ನೇ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಪುಷ್ಪಾಂಜಲಿ ಸಲ್ಲಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ, ಎಸ್. ಶಿವಕುಮಾರಸ್ವಾಮಿ, ಎಸ್.ಪಿ. ಮಂಜುನಾಥ್, ಶಿವಪುರ ಸುರೇಶ್, ಕಲಿಸು ಫೌಂಡೇಷನ್ ನಿಖಿಲೇಶ್, ಭಕ್ತಾದಿಗಳು, ಸಾರ್ವಜನಿಕರು, ಮಠದ ಗುರುಕುಲದ ಸಾಧಕರು ಹಾಗೂ ಸೇವಾ ಸಿಬ್ಬಂದಿ ಪಾಲ್ಗೊಂಡಿದ್ದರು. ಗೋಕಾಕದ ವಿದ್ಯಾ ಸೋಮಶೇಖರ್ ಮಗದುಂ ಹಾಗೂ ಜೆಎಸ್‌ಎಸ್ ಲಲಿತಕಲಾ ತಂಡದವರು ಪ್ರಾರ್ಥನೆ ಮತ್ತು ವಚನ ಗಾಯನ ನಡೆಸಿಕೊಟ್ಟರು. ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.