ಮರುಮೌಲ್ಯ ಮಾಪನ: ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮಾನ್ವಿತ

| Published : Jun 06 2024, 12:31 AM IST

ಮರುಮೌಲ್ಯ ಮಾಪನ: ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮಾನ್ವಿತ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ನವಚೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಮಾನ್ವಿತ ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶದಲ್ಲಿ 614 ಅಂಕ ಪಡೆದಿದ್ದರು. ಹಿಂದಿ ಪಠ್ಯ ವಿಷಯದಲ್ಲಿ 90 ಅಂಕ, ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದು, ಅಂಕಗಳು ಕಡಿಮೆ ಬಂದಿವೆ ಎಂದು ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಈ ವೇಳೆ ಹಿಂದಿ ಪಠ್ಯ ವಿಷಯದಲ್ಲಿ ಹೆಚ್ಚುವರಿ 7 ಅಂಕಗಳು ಲಭ್ಯವಾಗಿ, ಒಟ್ಟು 97 ಅಂಕಗಳು ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚುವರಿಯಾಗಿ 1 ಅಂಕ ಲಭಿಸಿ, 100ಕ್ಕೆ 100 ಅಂಕ ಗಳಿಸಿದ್ದಾರೆ. ಒಟ್ಟು 625ಕ್ಕೆ 622 ಅಂಕಗಳ ಪಡೆದು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯ ಮಟ್ಟದಲ್ಲಿ 4ನೇ ಸ್ಥಾನಕ್ಕೆ ಪಾತ್ರರಾಗಿದ್ದಾರೆ.

- ಎಸ್ಸೆಸ್ಸೆಲ್ಸಿ ಪರೀಕ್ಷೆ: ಹಿಂದಿಯಲ್ಲಿ 97, ಸಮಾಜ ವಿಜ್ಞಾನದಲ್ಲಿ 100 ಅಂಕ ಸಾಧನೆ

- ಈ ಮೊದಲು ಹಿಂದಿಯಲ್ಲಿ 90, ಸಮಾಜ ವಿಜ್ಞಾನದಲ್ಲಿ 99 ಅಂಕ ದಾಖಲಾಗಿತ್ತು

- 625ಕ್ಕೆ 622 ಅಂಕಗಳ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ: ಬಿಇಒ ಮಾಹಿತಿ - - - ಚನ್ನಗಿರಿ: ಪಟ್ಟಣದ ನವಚೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಮಾನ್ವಿತ ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶದಲ್ಲಿ 614 ಅಂಕ ಪಡೆದಿದ್ದರು. ಹಿಂದಿ ಪಠ್ಯ ವಿಷಯದಲ್ಲಿ 90 ಅಂಕ, ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದು, ಅಂಕಗಳು ಕಡಿಮೆ ಬಂದಿವೆ ಎಂದು ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಈ ವೇಳೆ ಹಿಂದಿ ಪಠ್ಯ ವಿಷಯದಲ್ಲಿ ಹೆಚ್ಚುವರಿ 7 ಅಂಕಗಳು ಲಭ್ಯವಾಗಿ, ಒಟ್ಟು 97 ಅಂಕಗಳು ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚುವರಿಯಾಗಿ 1 ಅಂಕ ಲಭಿಸಿ, 100ಕ್ಕೆ 100 ಅಂಕ ಗಳಿಸಿದ್ದಾರೆ. ಒಟ್ಟು 625ಕ್ಕೆ 622 ಅಂಕಗಳ ಪಡೆದು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯ ಮಟ್ಟದಲ್ಲಿ 4ನೇ ಸ್ಥಾನಕ್ಕೆ ಪಾತ್ರರಾಗಿದ್ದಾರೆ.

ಕೆ.ಎಸ್‌.ಮಾನ್ವಿತ ಹಿಂದಿ ವಿಷಯದಲ್ಲಿ 97 ಅಂಕ ಗಳಿಸಿದ್ದು ಬಿಟ್ಟರೆ ಇನ್ನುಳಿದ ಎಲ್ಲ ವಿಷಯಗಳಲ್ಲಿಯೂ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ತಿಳಿಸಿದ್ದಾರೆ.

- - - -5ಕೆಸಿಎನ್‌ಜಿ1:

ಕೆ.ಎಸ್.ಮಾನ್ವಿತ