ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಮೌಂಟ್‌ ಕಾರ್ಮೆಲ್‌ ಗೆ ಹಲವು ಪ್ರಶಸ್ತಿ

| Published : Aug 30 2024, 01:10 AM IST

ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಮೌಂಟ್‌ ಕಾರ್ಮೆಲ್‌ ಗೆ ಹಲವು ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕುವೆಂಪು ಕ್ರೀಡಾಂಗಣದಲ್ಲಿ ಎಂಕೆಸಿಪಿಎಂ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿಗಳ ಕ್ರೀಡಾ ಕೂಟದಲ್ಲಿ ತಾಲೂಕಿನ ಮೆಣಸೂರು ಮೌಂಟ್‌ ಕಾರ್ಮೆಲ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮೌಂಟ್‌ ಕಾರ್ಮೆಲ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಉಷಾ ತಿಳಿಸಿದ್ದಾರೆ.

ಕು. ಸಾನಿಕಾಗೆ ವೈಯ್ಯಕ್ತಿಕ ಚಾಂಪಿಯನ್ ಪ್ರಶಸ್ತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕುವೆಂಪು ಕ್ರೀಡಾಂಗಣದಲ್ಲಿ ಎಂಕೆಸಿಪಿಎಂ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿಗಳ ಕ್ರೀಡಾ ಕೂಟದಲ್ಲಿ ತಾಲೂಕಿನ ಮೆಣಸೂರು ಮೌಂಟ್‌ ಕಾರ್ಮೆಲ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮೌಂಟ್‌ ಕಾರ್ಮೆಲ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಉಷಾ ತಿಳಿಸಿದ್ದಾರೆ.

ಸಾನಿಕಾ 400 ಮೀ., 800 ಮೀ, , 3000 ಮೀಟರ್‌ ಓಟದಲ್ಲಿ ಹಾಗೂ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯ್ಯಕ್ತಿಕ ವಿಭಾಗದಲ್ಲಿ ಚಾಂಪಿಯನ್‌ ಪ್ರಶಸ್ತಿ ಪಡೆದಿದ್ದಾಳೆ. ಟ್ರಿಪಲ್ ಜಂಪ್‌ನಲ್ಲಿ ಸಂಜು ದ್ವಿತೀಯ, ಯೋಗದಲ್ಲಿ ದರ್ಶನ ಹಾಗೂ ಪೌರ್ಣಿಮಿ ದ್ವಿತೀಯ, ವೇಗದ ನಡಿಗೆಯಲ್ಲಿ ಮೌಲ್ಯ ದ್ವಿತೀಯ, 3000 ಮೀ. ಓಟದಲ್ಲಿ ನಿರ್ಮಿತ ದ್ವಿತೀಯ, 1500 ಮೀ.ಓಟದಲ್ಲಿ ನಿಶಾಂತ ದ್ವಿತೀಯ ಹಾಗೂ ಗುಡ್ಡಗಾಡು ಓಟದಲ್ಲಿ ತೃತೀಯ, ಚೇತನ 3000 ಮೀ. ಓಟದಲ್ಲಿ ತೃತೀಯ ಹಾಗೂ ಗುಡ್ಡ ಗಾಡು ಓಟದಲ್ಲಿ 6 ನೇ ಸ್ಥಾನ, ಆಶಾ ತಟ್ಟೆ ಎಸೆತದಲ್ಲಿ ದ್ವಿತೀಯ ಹಾಗೂ ಎತ್ತರ ಜಿಗಿತದಲ್ಲಿ ತೃತೀಯ, ಕ್ರಿಷ್ಟಲ್ ಗುಂಡು ಎಸೆತದಲ್ಲಿ ತೃತೀಯ, ಜಿ.ಎಸ್‌.ಸಾನಿಕ ಗುಡ್ಡಗಾಡು ಓಟದಲ್ಲಿ 4 ನೇ ಸ್ಥಾನ, ವಾಲೀಬಾಲ್‌ ನಲ್ಲಿ ಹರ್ಷಲ್ ಮತ್ತು ತಂಡ ದ್ವಿತೀಯ, ಖೋ ಖೋದಲ್ಲಿ ಪ್ರಜ್ವಲ್ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಿಸ್ಟರ್‌ ಉಷಾ, ಕ್ರೀಡಾ ಸಂಚಾಲಕ ಟಿ.ಮಂಜುನಾಥ್‌,ನಂದಿನಿ ಆಲಂದೂರು ಇದ್ದರು.