ಸಾರಾಂಶ
ಅಮಾವಾಸ್ಯೆ ಹಿನ್ನೆಲೆ ಗುರುವಾರ ಮರಡ್ಡಿಗುಡ್ಡದ ಮಹದೇಶ್ವರಸ್ವಾಮಿಯ ದರ್ಶನವಿಲ್ಲದೇ ಹೊರಗಡೆ ನಮಿಸಿ ತೆರಳುವ ಮೂಲಕ ನೂರಾರು ಭಕ್ತಾಧಿಗಳು ಅಸಮಾದಾನ ಹೊರಹಾಕಿ ನಡೆದ ಘಟನೆ ಜರುಗಿತು.
ಕನ್ನಡಪ್ರಭ ವಾತೆ೯ ಕೊಳ್ಳೇಗಾಲ
ಅಮಾವಾಸ್ಯೆ ಹಿನ್ನೆಲೆ ಗುರುವಾರ ಮರಡ್ಡಿಗುಡ್ಡದ ಮಹದೇಶ್ವರಸ್ವಾಮಿಯ ದರ್ಶನವಿಲ್ಲದೇ ಹೊರಗಡೆ ನಮಿಸಿ ತೆರಳುವ ಮೂಲಕ ನೂರಾರು ಭಕ್ತಾಧಿಗಳು ಅಸಮಾದಾನ ಹೊರಹಾಕಿ ನಡೆದ ಘಟನೆ ಜರುಗಿತು.ಪಟ್ಟಣದ ಹೃದಯ ಭಾಗದಲ್ಲಿರುವ ಮರಡಿಗುಡ್ಡದ ಮೇಲಿನ ಮಹದೇಶ್ವರ ದೇವಾಲಯವು ಇತಿಹಾಸ ಪ್ರಸಿದ್ಧ ಹಾಗೂ ಸಾಕ್ಷಾತ್ ಮಹದೇಶ್ವರರೇ ಮಂಡಿಯೂರಿದ್ದ ಪುಣ್ಯಕ್ಷೇತ್ರವೆಂದೆ ಜನಜನಿತ. ಅಂತಹ ಕ್ಷೇತ್ರದಲ್ಲಿ ಅಚ೯ಕರು ಮತ್ತು ದಾಸೋಹ ಟ್ರಸ್ಟ್ ನವರ ವೈಮನಸ್ಸಿನಿಂದಾಗಿ ದೇವಾಲಯದ ಬಾಗಿಲು ಆಗಿಂದಾಗ್ಗೆ ಮುಚ್ಚುವುದು, ಸಣ್ಣಪುಟ್ಟ ಮನಸ್ತಾಪಗಳು ಆಗಿಂದಾಗ್ಗೆ ಕಂಡು ಬಂದಿದ್ದರೂ ಸಹ ತಾಲೂಕು ಆಡಳಿತ ಜಾಣ ಮೌನ ತಾಳಿರುವುದು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ 2 ಗುಂಪಿನ ಸಮಸ್ಯೆ ಆಲಿಸುವ ಮೂಲಕ ಪುಣ್ಯಕ್ಷೇತ್ರದಲ್ಲಿನ ಮನಸ್ತಾಪ ಸುಖಾಂತ್ಯಕ್ಕೆ ಮುಂದಾಗಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಅಮಾವಾಸ್ಯೆ ಹಿನ್ನೆಲೆ ದೂರದ ಊರುಗಳಿಂದಲೂ ದೇವರ ದರ್ಶನ ಮಾಡುವ ಸಲುವಾಗಿ ಅಸಂಖ್ಯಾತ ಭಕ್ತರು ಇಂದು ಆಗಮಿಸಿದ್ದು ಬಾಗಿಲು ಬಂದ್ ಹಿನ್ನೆಲೆ ಹೊರಗಡೆ ನಿಂತು ನಮಿಸಿ ತೆರಳುವಂತಾಗಿದೆ.ಈ ವೇಳೆ ಹಲವು ಭಕ್ತರು ಮಾತನಾಡಿ, ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡದೇ ಭಕ್ತರಿಗೆ ದೇವರ ದರ್ಶನ ಮಾಡಲು ಸಂಬಂಧಪಟ್ಟವರು ಅನುವು ಮಾಡಿಕೊಡಬೇಕು. ಇಲ್ಲವಾದ್ದಲ್ಲಿ ಮುಂದಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ರವಾನಿಸಿ ನಿಗ೯ಮಿಸಿದ ಘಟನೆ ಜರುಗಿತು.