ಮಂಡ್ಯ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದೆ. ಕನ್ನಡ ಭಾಷೆ ಮಾತನಾಡುವ ಜತೆಗೆ ಪ್ರೀತಿ, ಗೌರವವನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆಗಳಿಗಾಗಿ ಅನ್ಯಭಾಷೆಗಳನ್ನು ಸಹ ಕಲಿಯಬೇಕು. ವಿಜ್ಞಾನ, ತಂತ್ರಜ್ಞಾನವನ್ನು ಬಳಕೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ನಾಡಿನಲ್ಲಿ ಹುಟ್ಟಿದ ಕವಿಗಳು, ಸಾಹಿತಿಗಳು, ಸಾಂಸ್ಕೃತಿಕ ಚಿಂತಕರು, ಚಿತ್ರನಟರು ಸೇರಿದಂತೆ ಹಲವು ಮಹನೀಯರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಜೊತೆಗೆ ಕನ್ನಡವನ್ನು ಹೆಚ್ಚು ಬಳಕೆ ಮಾಡಿ ಭಾಷೆ ಉಳಿವಿಗೆ ಶ್ರಮಿಸಿದ್ದಾರೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಸಾಪದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಹಿತಿ ಶಂಕರಾನಂದ ಹಿರೇಮರಳಿ ಅವರ ದಡ ಸಿಗಲೇ ಇಲ್ಲ ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಕನ್ನಡಾಂಭೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಪುತಿನ. ಸೇರಿದಂತೆ ಪ್ರಸ್ತುತ ದಿನಗಳ ಹೊಸ ತಲೆಮಾರಿನವರೆಗೂ ಹಲವಾರು ಕವಿಗಳು, ಸಾಹಿತಿಗಳು ಎಲ್ಲರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ನಾವುಗಳು ಸಹ ಕನ್ನಡ ಹೆಚ್ಚು ಕನ್ನಡ ಬಳಕೆ ಮಾಡಿ ಕುವೆಂಪು ಅವರ ವಿಶ್ವಮಾನ ಸಂದೇಶ ನಾವು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿದ್ದಾರೆ. ಹೊಸ ತಲೆಮಾರಿನವರು ಹೊಸ ಪದಗಳ ಅನ್ವೇಷಣೆ ಮಾಡುವ ಜೊತೆಗೆ ಬಳಕೆ ಮಾಡಬೇಕು ಎಂದರು.ಮಂಡ್ಯ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದೆ. ಕನ್ನಡ ಭಾಷೆ ಮಾತನಾಡುವ ಜತೆಗೆ ಪ್ರೀತಿ, ಗೌರವವನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆಗಳಿಗಾಗಿ ಅನ್ಯಭಾಷೆಗಳನ್ನು ಸಹ ಕಲಿಯಬೇಕು. ವಿಜ್ಞಾನ, ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಭಾಷೆ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದಂತೆ ಕಸಾಪ ಬಳಗವು ಮೇನಾಗರ ಪ್ರಕಾಶ್ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಭಾಷೆ, ಸಾಹಿತ್ಯವನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದಾರಿತಪ್ಪುತ್ತಿದ್ದಾರೆ. ದೊಡ್ಡದೊಡ್ಡ ಉದ್ಯಮಿ, ಅಧಿಕಾರಿಗಳು, ಶ್ರೀಮಂತರ ಮಕ್ಕಳೇ ಹಲವಾರು ದುಶ್ಚಟಗಳು, ರಾಬರಿಗಳ ಮಾಡುತ್ತಿರುವುದನ್ನು ನೋಡಿದರೆ ನಮ್ಮ ಸಮಾಜ ಯತ್ತಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಸಾಹಿತಿ ಶಂಕರಾನಂದ ಹಿರೇಮರಳಿ ಅವರ ‘ದಡ ಸಿಗಲೇ ಇಲ್ಲ’ ಎಂಬ ಕಾದಂಬರಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾಶಿವಲಿಂಗಯ್ಯ, ಸಾಹಿತಿ ಚಂದ್ರಶೇಖರಯ್ಯ ಅವರು ಪುಸ್ತಕ ಕುರಿತು ಮಾತನಾಡಿದರು. ಮೈಸೂರು ಮಹಾಜನ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಅವರಿಗೆ ತವರು ಸನ್ಮಾನ ಮಾಡಲಾಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೇಬೀಡು ಎಚ್.ಸಿ.ದನಂಜಯ್, ಜೆ.ದೇವೇಗೌಡ, ಪಾರ್ಥ ಸೇರಿದಂತೆ ಹಲವು ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಸಮಾಜ ಸೇವಕರಾದ ಹೆಗ್ಗಡಹಳ್ಳಿ ರಾಮಕೃಷ್ಣ, ಟಿ.ಪಿ.ರೇವಣ್ಣ, ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಹರ್ಷ, ವಿ.ಪಣ್ಣೆದೊಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎಲ್.ಆದರ್ಶ, ಚಂದ್ರಶೇಖರಯ್ಯ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಜರಿದ್ದರು.