ಬಿಜೆಪಿ ತೊರೆದು ಹಲವರು ಕಾಂಗ್ರೆಸಿಗೆ ಸೇರ್ಪಡೆ

| Published : Apr 16 2024, 01:02 AM IST

ಬಿಜೆಪಿ ತೊರೆದು ಹಲವರು ಕಾಂಗ್ರೆಸಿಗೆ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಯುವ ಮುಖಂಡ ಮಾಜಿ ಗ್ರಾಪಂ ಸದಸ್ಯ ಸುಭಾಷ್ ಕಣ್ಣೂರ ಹಾಗೂ ಮುಖಂಡ ಹಾಗೂ ಬಾಬುರಾವ ಪಾಟೀಲ್ ಕಣ್ಣೂರ, ತಮ್ಮ ನೂರಾರು ಬೆಂಬಲಿಗರೊಂದಿಗೆ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಬಿಜೆಪಿ ಯುವ ಮುಖಂಡ ಮಾಜಿ ಗ್ರಾಪಂ ಸದಸ್ಯ ಸುಭಾಷ್ ಕಣ್ಣೂರ ಹಾಗೂ ಮುಖಂಡ ಹಾಗೂ ಬಾಬುರಾವ ಪಾಟೀಲ್ ಕಣ್ಣೂರ, ತಮ್ಮ ನೂರಾರು ಬೆಂಬಲಿಗರೊಂದಿಗೆ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೖಜುನಾಧ ತಡಕಲ, ಮಾಜಿ ಸಚಿವ ರೇವುನಾಯಕ ಬೆಳ್ಳಮಗಿ, ಮಹೇಶ್ ಕುಂಬಾರ, ಶರಣಬಸಪ್ಪ ಪೂಜಾರಿ, ಸಿರಗಾಪುರ, ಚೆನ್ನಮ್ಮ ಹೇರಾಳೆ, ಸಿದ್ದಮ್ಮ ಸಿರಗಾಪುರ, ಜಗದೇವಿ ಬಾಬುರಾವ, ರಮೇಶ ಸಿರಗಾಪುರ, ಹನುಮಂತ ಮಡಿವಾಳ, ಗುಂಡರಾವ, ಸವಿತಾ ಮಾಂತಪ್ಪ, ಮುಖಂಡ ಸತೀಶ್ ಸಾವು ಕಾಂಗ್ರೆಸ್ ಧ್ವಜ ನಿಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾ ತಡಕಲ ಮಾತನಾಡಿ, ಇವತ್ತಿನ ದಿವಸ ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಶಾಸಕರು, ಸಂಸದರು, ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಮತ ಕೇಳಲು ಯಾವ ನೈತಿಕತೆಯನ್ನು ಇವರಿಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ನಿರ್ಲಕ್ಷ ತೋರುವುದರಿಂದ ಬೇಸತ್ತು ಜನ ಬಿಜೆಪಿ ತೊರೆದು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದರು.

ಇನ್ನು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿಕೊಳ್ಳಲಿದ್ದಾರೆ ಎಂದರು. ಬಿಜೆಪಿ ದುರಾಡಳಿತ ಸಹಿಸಲಾಗದೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಎಂದು ತಡಕಲ್‌ ತಿಳಿಸಿದರು.

ಮಾಜಿ ಗ್ರಾಪಂ ಸದಸ್ಯ ಮಾತನಾಡಿ, ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ 23 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿದ್ದೇನೆ ಅದರೆ ಸಂಸದರಾದ ಉಮೇಶ್ ಜಾದವ್ ಅವರಿಗೆ ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರು ನೆನಪಿಗೆ ಬರುತ್ತಾರೆ. ಶಾಸಕರು, ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಶಾಸಕರು ಸಂಸದರು ಐದು ವರ್ಷದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಅಸಹನೆ ಹೊರಹಾಕಿದರು.