ದೇವೇಗೌಡರ ಗರಡಿಯಲ್ಲಿ ಅನೇಕ ರಾಜಕಾರಣಿಗಳು ಪಳಗಿದ್ದಾರೆ

| Published : May 20 2025, 01:14 AM IST

ಸಾರಾಂಶ

ರೈತನ ಮಗ ರಾಷ್ಟ್ರದ ಪ್ರಧಾನಿ ಸ್ಥಾನವನ್ನು ಅಲಂಕರಿಸಬಹುದು ಎಂಬುದನ್ನು ನಮ್ಮ ಸಂವಿಧಾನ ತೋರಿಸಿಕೊಟ್ಟಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 93ನೇ ವಸಂತಕ್ಕೆ ಪಾರ್ದಾಪಣೆ ಮಾಡುತ್ತಿರುವುದು ನಮಗಷ್ಟೇ ಅಲ್ಲ ದೇಶದ ಜನತೆಗೆ ಸಂತಸವನ್ನು ಉಂಟು ಮಾಡಿದೆ ಎಂದು ಜೆಡಿಎಸ್ ಮುಖಂಡ ಹೊಸೂರ್ ಗಂಗಾಧರ್ ಹೇಳಿದರು. ಗ್ರಾಮೀಣ ಪ್ರದೇಶದ ಜನರ ಚಿಂತಕರಾಗಿದ್ದಾರೆ. ರೈತರ ಧ್ವನಿಯಾಗಿ ಕೆಲಸ ಮಾಡಿದವರು, ಸಾಮಾಜಿಕ ನ್ಯಾಯವನ್ನು ಕೊಡಿಸುವುದರಲ್ಲಿ ವಿಶೇಷ ಕಾಳಜಿ ತೋರಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆರೈತನ ಮಗ ರಾಷ್ಟ್ರದ ಪ್ರಧಾನಿ ಸ್ಥಾನವನ್ನು ಅಲಂಕರಿಸಬಹುದು ಎಂಬುದನ್ನು ನಮ್ಮ ಸಂವಿಧಾನ ತೋರಿಸಿಕೊಟ್ಟಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 93ನೇ ವಸಂತಕ್ಕೆ ಪಾರ್ದಾಪಣೆ ಮಾಡುತ್ತಿರುವುದು ನಮಗಷ್ಟೇ ಅಲ್ಲ ದೇಶದ ಜನತೆಗೆ ಸಂತಸವನ್ನು ಉಂಟು ಮಾಡಿದೆ ಎಂದು ಜೆಡಿಎಸ್ ಮುಖಂಡ ಹೊಸೂರ್ ಗಂಗಾಧರ್ ಹೇಳಿದರು.

ನಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವೇಗೌಡರಿಗೆ ಹೆಚ್ಚಿನ ಆಯಸ್ಸು ಮತ್ತು ಆರೋಗ್ಯವನ್ನು ಕೊಡುವಂತೆ ಪ್ರಾರ್ಥಿಸಿ ಮಾತನಾಡಿದ ಅವರು, ಅನೇಕ ದಕ್ಷ ರಾಜಕಾರಣಿಗಳನ್ನು ತಮ್ಮ ರಾಜಕೀಯ ಗರಡಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಚಿಂತಕರಾಗಿದ್ದಾರೆ. ರೈತರ ಧ್ವನಿಯಾಗಿ ಕೆಲಸ ಮಾಡಿದವರು, ಸಾಮಾಜಿಕ ನ್ಯಾಯವನ್ನು ಕೊಡಿಸುವುದರಲ್ಲಿ ವಿಶೇಷ ಕಾಳಜಿ ತೋರಿದ್ದಾರೆ ಎಂದರು.ಮಾಜಿ ಶಾಸಕ ಜಿಎಸ್ ಪರಮೇಶ್ವರಪ್ಪ ಮಾತನಾಡಿ, ದೇವೇಗೌಡರು ಮಂತ್ರಿಯಾಗಿ, ಮುಖ್ಯಮಂತ್ರಿ ಆಗಿ, ಪ್ರಧಾನಿಯಾಗಿ ರಾಜ್ಯ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ, ಅವರ ಸೇವೆ ಹಾಗೂ ಮಾರ್ಗದರ್ಶನ ಅಗತ್ಯವಿದೆ ಎಂದರು. ಅರಸೀಕೆರೆ ತಾಲೂಕು ಜೆಡಿಎಸ್ ಪಕ್ಷದಿಂದ ಮತ್ತು ದೇವೇಗೌಡರ ಅಭಿಮಾನಿಗಳ ನೇತ್ರತ್ವದಲ್ಲಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಆಸ್ಪತ್ರೆಯಲ್ಲಿ ಇದ್ದ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸುತಿದ್ದೇವೆ. ದೇವೇಗೌಡರ ಗರಡಿಯಲ್ಲಿ ಬೆಳೆದ ಸಾಕಷ್ಟು ಜನ ಮುಖ್ಯಮಂತ್ರಿಗಳಾಗಿ ಸಚಿವರಾಗಿ, ಕೇಂದ್ರ ಮಂತ್ರಿಗಳಾಗಿ ಅಧಿಕಾರ ವಹಿಸಿದ್ದಾರೆ, ದೇವೇಗೌಡರ ಆಶೀರ್ವಾದ ಇನ್ನು ನಮಗೆಲ್ಲರಿಗೂ ಅಗತ್ಯವಿದೆ ದೇವೇಗೌಡರೇ ಒಂದು ಶಕ್ತಿ ಎಂದರು. ಜೆಡಿಎಸ್ ಮುಖಂಡ ರಾಂಪುರ ಶೇಖರಪ್ಪ ಮಾತನಾಡಿದರು, ಕುಮಾರಣ್ಣ , ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ರಮೇಶ್ ಮಾರುತಿ ನಗರ, ಲಾಳನಕೆರೆ ಯೋಗೀಶ್ , ನಿರಂಜನ್, ಸಂತೋಷ್, ಗಂಡಸಿ ಜೆಡಿಎಸ್ ಮುಖಂಡ ಆಲದಹಳ್ಳಿ ಶಂಕರ್, ಅಶ್ವಥ್, ವಿಭಿನ್ ಸೇರಿದಂತೆ ದೇವೇಗೌಡರ ಅಭಿಮಾನಿಗಳು ಉಪಸ್ಥಿತರಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ದೇವೇಗೌಡರ ಸೇವೆಯನ್ನು ಸ್ಮರಿಸಿದರು ಮತ್ತು ಅವರ ಹುಟ್ಟುಹಬ್ಬದ ಶುಭ ಕೋರಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಅದೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎಚ್ ಡಿ ದೇವೇಗೌಡರ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಂಚುವ ಮೂಲಕ ಹುಟ್ಟುಹಬ್ಬ ಸಂಭ್ರಮವನ್ನು ಸಂಭ್ರಮಿಸಿದರು.