ಕಾಂಗ್ರೆಸ್ಸಿನಿಂದ ಹಲವು ಜನಪರ ಯೋಜನೆ ರದ್ದು: ವಿ. ಸುನೀಲ್‌ಕುಮಾರ್‌

| Published : May 04 2024, 12:32 AM IST

ಕಾಂಗ್ರೆಸ್ಸಿನಿಂದ ಹಲವು ಜನಪರ ಯೋಜನೆ ರದ್ದು: ವಿ. ಸುನೀಲ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ ಬಿಜೆಪಿಯ ಬಲವನ್ನು ಹೆಚ್ಚಿಸಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲಕುಮಾರ ಮನವಿ ಮಾಡಿದರು.

ಹೊನ್ನಾವರ: ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಮೋರಿಯನ್ನೂ ಅಭಿವೃದ್ಧಿಪಡಿಸಲಾಗದ ಕಾಂಗ್ರೆಸ್‌ ಸರ್ಕಾರ, ಜನರಿಗೆ ಅನುಕೂಲವಾಗುವ ಹಲವಾರು ಜನಪರ ಯೋಜನೆಗಳನ್ನು ರದ್ದು ಮಾಡಿದೆ. ಇದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್‌ಕುಮಾರ್ ವ್ಯಂಗ್ಯವಾಡಿದರು.ಪಟ್ಟಣದಲ್ಲಿ ಶುಕ್ರವಾರ ಸಾಯಂಕಾಲ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಹಲವಾರು ಯೋಜನೆಗಳನ್ನು ರದ್ದುಪಡಿಸಿ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಕಿಸಾನ್ ಸಮ್ಮಾನ್, ರೈತನಿಧಿ, ವಿದ್ಯಾಸಿರಿ ಹಾಸ್ಟೆಲ್ ಸಹಾಯಧನ ರದ್ದು ಪಡಿಸಿದೆ. ಹಾಲಿನ ಸಬ್ಸಿಡಿ ನಿಲ್ಲಿಸಿದೆ. ಕಂದಾಯ ಇಲಾಖೆಯ ದಾಖಲಾತಿಗಳಿಗೆ ನಾಲ್ಕು ಪಟ್ಟು ಹಣ ಹೆಚ್ಚಿಸಿದೆ. ಉತ್ತಮ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ ಬಿಜೆಪಿಯ ಬಲವನ್ನು ಹೆಚ್ಚಿಸಿ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾಸಿರ್ ಖಾನ್ ಗೆದ್ದಾಗ ಪಾಕಿಸ್ತಾನ ಜಿಂದಾಬಾದ್ ಎನ್ನುವ ಕಾಂಗ್ರೆಸ್ಸಿಗರ ಪ್ರೀಪ್ಲಾನ್ ಏನು ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಇದ್ದಾಗ ದೊಡ್ಡ ಪ್ರಮಾಣದ ೫೪ ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಅಂದರೆ ಈಗ ನರೇಂದ್ರ ಮೋದಿ ಅಲೆ ಇರುವಾಗ ಅವರು ಈಗ ಗೆಲ್ಲಲು ಸಾಧ್ಯವಿಲ್ಲ ಎಂದರು.

ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಗೋವಿಂದ ನಾಯ್ಕ, ಶಿವಾನಂದ ಹೆಗಡೆ, ಜಿ.ಜಿ. ಶಂಕರ, ವೆಂಕಟೇಶ ನಾಯಕ, ಎಂ.ಜಿ. ನಾಯ್ಕ, ಉಮೇಶ ನಾಯ್ಕ, ಗಣಪತಿ ಗೌಡ, ವಿನೋದ ನಾಯ್ಕ, ರಾಜೇಶ ಭಂಡಾರಿ, ಶಿವರಾಜ ಮೇಸ್ತ, ಟಿ.ಟಿ. ನಾಯ್ಕ, ಭಾಗ್ಯ ಮೇಸ್ತ ಇತರರಿದ್ದರು.