ಉಡುಪಿ: ಕನ್ನಡ ರಂಗಭೂಮಿಗೆ ಕಂಪನಿ ನಾಟಕಗಳ ಕೊಡುಗೆ ಅಪಾರ, ಮೈಸೂರು ಅರಸು ಮನೆತನವು ಕನ್ನಡ ರಂಗಭೂಮಿಯನ್ನು ಪೋಷಿಸಿತು. ಗುಬ್ಬಿ ವೀರಣ್ಣ, ಟಿ.ಪಿ. ಕೈಲಾಸಂ, ಸಂಸ , ಬಿ.ವಿ. ಕಾರಂತ್. ಕೆ.ವಿ. ಸುಬ್ಬಣ್ಣ ಪರ್ವತವಾಣಿ, ಮಾಸ್ಟರ್ ಹಿರಿಯಣ್ಣಯ್ಯ ಇನ್ನಿತರರು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು ಎಂದು ಪ್ರಜ್ಞಾನಂ ಟ್ರಸ್ಟ್‌ನ ಸಂಚಾಲಕ, ಲೇಖಕ ಜಿ.ಪಿ. ಪ್ರಭಾಕರ ತುಮರಿ ಅಭಿಪ್ರಾಯಪಟ್ಟರು.ಮಣಿಪಾಲದ ಪೂರ್ಣಪ್ರಜ್ಞ ರೋಟರಿ, ಸಾಮಾಜಿಕ ಸಬಲೀಕರಣ ಕೇಂದ್ರ, ಪೂರ್ಣಪ್ರಜ್ಞ ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಪಿಪಿಸಿಯ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕ ಜಂಟಿಯಾಗಿ ಏರ್ಪಡಿಸಿದ್ದ ರೊಟೇರಿಯನ್ ಎಚ್.ಎನ್.ಎಸ್. ರಾವ್ ಸಂಸ್ಮರಣಾ ದತ್ತಿ ಉಪನ್ಯಾಸ ಕಾರ್‍ಯಕ್ರಮದಲ್ಲಿ ಮಾತನಾಡಿದರು. ನಾಟಕ ಕೇವಲ ಮನರಂಜನೆಯ ಮಾಧ್ಯಮಾವಲ್ಲ, ಅದು ಮನುಷ್ಯನ ವಿಕಾಸದ ಸಾಧನ, ಶೈಕ್ಷಣಿಕ ಪ್ರಕ್ರಿಯೆ, ಕನ್ನಡ ರಂಗಭೂಮಿ ಹಲವು ಸಾಧ್ಯತೆಯಲ್ಲಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಎಚ್.ಎನ್.ಎಸ್. ರಾಯರ ಬದುಕು ಹಾಗೂ ಸಾಧನೆಗಳ ಬಗೆಗೆ ಪೂರ್ಣಪ್ರಜ್ಞ ರೋಟರಿ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊತಾಯ ವಿವರ ನೀಡಿದರು. ಮಣಿಪಾಲ ರೋಟರಿ ಅಧ್ಯಕ್ಷರಾದ ಶಶಿಕಲಾ ರಾಜವರ್ಮ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್., ಎಂಐಸಿ (ಮಾಹೆ) ನಿರ್ದೇಶಕಿ ಡಾ. ಶುಭಾ, ಎಚ್.ಎನ್.ಎಸ್. ರಾಯರ ಪತ್ನಿ ಸರಳ ಎಚ್.ಎಸ್., ಪುತ್ರಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಕುಮಾರ್ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ಹರಿಣಾಕ್ಷಿ ಶೆಟ್ಟಿ ವಂದಿಸಿ, ಅಮೃತಾ ಭಟ್ ನಿರೂಪಿಸಿದರು.ಕನ್ನಡ ರಂಗಭೂಮಿಗೆ ಹಲವು ಸಾಧ್ಯತೆ: ಪ್ರಭಾಕರ ತುಮರಿ
ಕನ್ನಡ ರಂಗಭೂಮಿಗೆ ಕಂಪನಿ ನಾಟಕಗಳ ಕೊಡುಗೆ ಅಪಾರ, ಮೈಸೂರು ಅರಸು ಮನೆತನವು ಕನ್ನಡ ರಂಗಭೂಮಿಯನ್ನು ಪೋಷಿಸಿತು. ಗುಬ್ಬಿ ವೀರಣ್ಣ, ಟಿ.ಪಿ. ಕೈಲಾಸಂ, ಸಂಸ , ಬಿ.ವಿ. ಕಾರಂತ್. ಕೆ.ವಿ. ಸುಬ್ಬಣ್ಣ ಪರ್ವತವಾಣಿ, ಮಾಸ್ಟರ್ ಹಿರಿಯಣ್ಣಯ್ಯ ಇನ್ನಿತರರು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು ಎಂದು ಪ್ರಜ್ಞಾನಂ ಟ್ರಸ್ಟ್‌ನ ಸಂಚಾಲಕ, ಲೇಖಕ ಜಿ.ಪಿ. ಪ್ರಭಾಕರ ತುಮರಿ ಅಭಿಪ್ರಾಯಪಟ್ಟರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.