ಕನ್ನಡಪ್ರಭ ವಾರ್ತೆ ಬೆಳಗಾವಿಖ್ಯಾತ ಹಿರಿಯ ನಟ, ನಿರ್ದೇಶಕ ಹಾಗೂ ಟೆರಿಟೋರಿಯಲ್ ಆರ್ಮಿಯ ಗೌರವ ಲೆಫ್ಟಿನೆಂಟ್ ಕರ್ನಲ್ ನಾನಾ ಪಾಟೇಕರ್ ಅವರ ನಿಧನಕ್ಕೆ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಖ್ಯಾತ ಹಿರಿಯ ನಟ, ನಿರ್ದೇಶಕ ಹಾಗೂ ಟೆರಿಟೋರಿಯಲ್ ಆರ್ಮಿಯ ಗೌರವ ಲೆಫ್ಟಿನೆಂಟ್ ಕರ್ನಲ್ ನಾನಾ ಪಾಟೇಕರ್ ಅವರ ನಿಧನಕ್ಕೆ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಪ್ರಹಾರ್ ದಿ ಫೈನಲ್ ಅಟ್ಯಾಕ್ ಚಲನಚಿತ್ರದ ತಯಾರಿಗಾಗಿ ಬೆಳಗಾವಿಯಲ್ಲಿ ಮೂರು ವರ್ಷಗಳ ಕಠಿಣ ಸೇನಾ ತರಬೇತಿ ಪಡೆದಿದ್ದ ನಾನಾ ಪಾಟೇಕರ್, ಚಿತ್ರದಲ್ಲಿ ಮೇಜರ್ ವಿ.ಎಸ್. ಚವಾಣ್ ಪಾತ್ರದ ಮೂಲಕ ಮರಾಠಾ ಸೈನಿಕರ ಶೌರ್ಯ, ಶಿಸ್ತು ಹಾಗೂ ಸಾಹಸವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದರು.
ಸಿನಿಮಾ ಕ್ಷೇತ್ರದಾಚೆಗೂ ಭಾರತೀಯ ಸೇನೆ ಹಾಗೂ ದೇಶದ ಸೇವೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು, ರೆಜಿಮೆಂಟ್‌ನೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಅವರ ಅಭಿನಯದ ಮೂಲಕ ಮರಾಠಾ ಸೈನಿಕರ ವೀರ ಪರಂಪರೆ ಹಾಗೂ ರೆಜಿಮೆಂಟ್‌ನ ಮೌಲ್ಯಗಳು ಜನಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ರೆಜಿಮೆಂಟ್ ಸ್ಮರಿಸಿದೆ.ಮರಾಠಾ ಲೈಟ್ ಇನ್‌ಫೆಂಟ್ರಿಯ ಕರ್ನಲ್ ಹಾಗೂ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್ ಅವರು ನಾನಾ ಪಾಟೇಕರ್ ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ. ರೆಜಿಮೆಂಟ್‌ನೊಂದಿಗಿನ ಅವರ ಬಾಂಧವ್ಯ ಹಾಗೂ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ ಎಂದು ತಿಳಿಸಿದ್ದಾರೆ.