ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮ್ಯಾರಾಥಾನ್ ಓಟ

| Published : Mar 10 2025, 12:15 AM IST

ಸಾರಾಂಶ

ಹಾಸನ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ, ಡ್ರಗ್ಸ್ ಫ್ರೀ ಕರ್ನಾಟಕ, ಫಿಟ್ನೆಸ್ ಫಾರ್ ಅಲ್ ಹಾಗೂ ಎಂಬ ಶೀರ್ಷಿಕೆಯಡಿಯಲ್ಲಿ ಭಾನುವಾರ ಬೆಳಿಗ್ಗೆ ಹಾಸನ ನಗರದ ಡೇರಿ ಸರ್ಕಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಿಂದ ಪೊಲೀಸ್ ಮ್ಯಾರಾಥಾನ್ ಓಟ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿ ಸಿಬ್ಬಂದಿಗಳು ಸುಮಾರು 5 ಕಿಲೋ ಮೀಟರ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ, ಡ್ರಗ್ಸ್ ಫ್ರೀ ಕರ್ನಾಟಕ, ಫಿಟ್ನೆಸ್ ಫಾರ್ ಅಲ್ ಹಾಗೂ ಎಂಬ ಶೀರ್ಷಿಕೆಯಡಿಯಲ್ಲಿ ಭಾನುವಾರ ಬೆಳಿಗ್ಗೆ ಹಾಸನ ನಗರದ ಡೇರಿ ಸರ್ಕಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಿಂದ ಪೊಲೀಸ್ ಮ್ಯಾರಾಥಾನ್ ಓಟ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಅವರ ನೇತೃತ್ವದಲ್ಲಿ ನಗರದ ಡೇರಿ ವೃತ್ತದಿಂದ ಸಾಲಗಾಮೆ ರಸ್ತೆಯ ಸುಬೇದಾರ್ ನಾಗೇಶ್ ಸರ್ಕಲ್‌ವರೆಗೆ ನಡೆದ ಮ್ಯಾರಾಥಾನ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಗಮನ ಸೆಳೆದರು.

ಈ ವೇಳೆ ಎಸ್ಪಿ ಮಹಮ್ಮದ್ ಸುಜೀತಾ ಮಾತನಾಡಿ, ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಥಾ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಗೆ ಸುಮಾರು 5 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದು ಎಲ್ಲರೂ ಇಂದು ಜಾಥಾದಲ್ಲಿ ಭಾಗವಹಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿ ಸಿಬ್ಬಂದಿಗಳು ಸುಮಾರು 5 ಕಿಲೋ ಮೀಟರ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಪೊಲೀಸ್ ಅಧಿಕಾರಿಗಳು, ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಎಸ್.ಡಿ.ಎಂ. ಕಾಲೇಜು ಮುಖ್ಯಸ್ಥರು ಪ್ರಸನ್ನ ಎನ್. ರಾವ್. ಪ್ರಾಂಶುಪಾಲೆ ಶೈಲಜಾ ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.