ಸಾರಾಂಶ
Marigouda HulakalDeath: CM Siddaramaia give condolence
ಕನ್ನಡಪ್ರಭ ವಾರ್ತೆ ಶಹಾಪುರ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದ, ರಾಜ್ಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರೂ ಆಗಿರುವ ಕುರುಬ ಸಮಾಜದ ಹಿರಿಯ ಮುಖಂಡ ಮರಿಗೌಡ ಪಾಟೀಲ್ ಹುಲಕಲ್ ಮಂಗಳವಾರ ರಾತ್ರಿ 8.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿ, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ತಾಲೂಕಿನಲ್ಲಿ ಮರಿಗೌಡ ಹುಲಕಲ್ ಎಂದೇ ಚಿರಪರಿಚಿತರು. ರಾಜ್ಯ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಬೆಂಬಲಿಗರಾಗಿದ್ದ ಮರಿಗೌಡ ಕಟ್ಟಾ ಕಾಂಗ್ರೆಸ್ಸಿಗರು.
ತಾಲೂಕಿನಲ್ಲಿ ಕುರುಬ ಸಮಾಜ ಸೇರಿದಂತೆ ಹಲವು ಸಮಾಜದ ಜನರೊಂದಿಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಸೋಮವಾರ ಅವರ ಜನನ ದಿನವಾದ್ದರಿಂದ ನೂರಾರು ಜನ ಅವರಿಗೆ ಶುಭಾಶಯ ಕೋರಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಸೋಮವಾರ ಜನುಮದಿನ ಆಚರಣೆ, ಮಂಗಳವಾರ ಅಗಲಿಕೆಯಿಂದಾಗಿ ಅವರ ಬಂಧು-ಅಭಿಮಾನಿಗಳಲ್ಲಿ ಅತೀವ ದುಃಖ ಉಂಟುಮಾಡಿದೆ.ಸ್ವಗ್ರಾಮ ಹುಲಕಲ್‌ನ ಮನೆಯಲ್ಲಿದ್ದಾಗ, ಹಠಾತ್ತನೇ ಎದೆ ನೋವುಂಟಾಗಿ ಮಗನೊಂದಿಗೆ ನಗರದ ಸ್ಪಂದನ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ನಂತರದ 10 ನಿಮಿಷ ಚನ್ನಾಗಿಯೇ ಮಾತಾಡಿದ್ದಾರೆ. ನಂತರ ಮತ್ತೊಮ್ಮೆ ತೀವ್ರ ಹೃದಯಾಘಾತ ಉಂಟಾಗಿದೆ ಎಂದು ಸಂಬಂಧಿಕರು ತಿಳಿಸಿದರು. ಮೃತರು, ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಬಂಧುಗಳನ್ನು ಬುಧವಾರ ಸಂಜೆ 5 ಗಂಟೆಗೆ ಸ್ವಗ್ರಾಮ ಹುಲಕಲ್ ನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತೆಂದು ಕುಟುಂಬದ ಮೂಲಗಳು ತಿಳಿಸಿವೆ.
ಶೋಕ ಸಂದೇಶ: ಮರಿಗೌಡ ಹುಲ್ಕಲ್ ಅವರ ಹಠಾತ್ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ವೈಯುಕ್ತಿಕವಾಗಿ ನನಗೆ ಆಘಾತ ತಂದಿದೆ. ನನ್ನ ಪ್ರತಿಯೊಂದು ಕಾರ್ಯದಲ್ಲಿ ಜೊತೆಗಿದ್ದು ಸಹಕರಿಸಿರುವ ಸರಳ ಸಜ್ಜನಿಕೆ ವ್ಯಕ್ತಿ ಅವರು. ಅವರ ಅಗಲಿಕೆ ನೋವು ತಡೆಯುವ ಶಕ್ತಿ ಭಗವಂತ ಅವರ ಕುಟುಂಬಕ್ಕೂ ಮತ್ತು ಅಭಿಮಾನಿಗಳಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಣ್ಣ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ತಿಳಿಸಿದ್ದಾರೆ.-----
ಫೋಟೊ: 24ವೈಡಿಆರ್2ಮರಿಗೌಡ ಹುಲ್ಕಲ್, ಕಾಂಗ್ರೆಸ್ ಮುಖಂಡರು
ಫೋಟೊ: 24ವೈಡಿಆರ್3ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮರಿಗೌಡ ಹುಲ್ಕಲ್
------