ಸಾರಾಂಶ
- ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಘೋಷಣೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಈ ಬಾರಿ ಊರಿನ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯನ್ನು ಮೇ 20, 21 ಮತ್ತು 22 ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಹೇಳಿದರು.
ಶುಕ್ರವಾರ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಜಾತ್ರಾ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಇಲ್ಲಿನ ಮಾರಿ ಗದ್ದುಗೆ ವಿಶೇಷವಾಗಿ ಉದ್ಭವವಾಗಿದೆ. ಅನಾಧಿಕಾಲದಿಂದಲೂ ಶ್ರೀ ಕೋಟೆ ಮಾರಿ ಕಾಂಬ ದೇವಿ ಊರಿನ ತಳ ಸಮುದಾಯದಿಂದ ಹಿಡಿದು ಮೇಲ್ವರ್ಗದ ಸಮುದಾಯದವರೆಗೆ ಸಮಾನವಾಗಿ ಹರಿಸಿ ಹಾರೈಸುತ್ತಾ, ಊರಿನ ಅಭಿವೃದ್ಧಿ, ಶಾಂತಿಗೆ ಆಶೀರ್ವದಿಸುತ್ತಾ ಬಂದಿದ್ದಾಳೆ. ಪ್ರತೀ 3 ವರ್ಷಕ್ಕೊಮ್ಮೆ ಈ ಮಾರಿಕಾಂಬ ಜಾತ್ರೆ ನಡೆಯುತ್ತದೆ. ಜಾತ್ರಾ ಸಮಿತಿ ಅಧ್ಯಕ್ಷನಾಗಿ 6ನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದ್ದೀರಿ. ಎಲ್ಲರೂ ಒಗ್ಗೂಡಿ, ವಿಶ್ವಾಸದಿಂದ, ಪ್ರೀತಿಯಿಂದ ಊರಿನ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿಸಲು ಶ್ರಮಿಸೋಣ ಎಂದರು.ಈ ಬಾರಿ ಜಾತ್ರೆ ಅತ್ಯಂತ ವೈಭವಯುತವಾಗಿ ನಡೆಸೋಣ. ಕಳೆದ ಬಾರಿ ಜಾತ್ರೆ ಪರ ಊರಿನವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುವಂತೆ ನಿಮ್ಮೆಲ್ಲರ ಸಹಕಾರದಿಂದ ಹಾಗೂ ಮಾರಿಕಾಂಬ ದೇವಿ ಆಶೀರ್ವಾದಿಂದ ಜರುಗಿದೆ. ಜಾತ್ರೆಯಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಆದ್ದರಿಂದ ಶ್ರದ್ಧಾ ಭಕ್ತಿ ಹಾಗೂ ಕ್ರಮಬದ್ಧವಾಗಿ ನಡೆಸೋಣ.ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ದೇವಿ ವಿಗ್ರಹದ ಕೆತ್ತನೆಗೆ ವೀಳ್ಯೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರಶಾಂತ್.ಎಲ್.ಶೆಟ್ಟಿ, ಎಚ್.ಎನ್.ರವಿಶಂಕರ್, ಬಿ.ಎಸ್.ಆಶೀಶ್‌ಕುಮಾರ್, ಸುನೀಲ್ ಕುಮಾರ್, ವೈ.ಎಸ್.ರವಿ, ಕೃಷ್ಣಮೂರ್ತಿ,ಕೆ.ಟಿ.ಚಂದ್ರು, ಮಂಜು ಪೆರುಮಾಳ್, ಎನ್.ಎಂ.ಕಾರ್ತಿಕ್, ನಾಗ ಭೂಷಣ, ಸುರಭಿ ರಾಜೇಂದ್ರ, ಶ್ರೀಧರಪಾನಿ, ಮಂಜುನಾಥ್‌ಶೆಟ್ಟಿ, ಮೆಣಸೂರು ಮಂಜು, ಮನೋಜ್, ಹಳೇಪೇಟೆ ಶಂಕರ, ಪ್ರಕಾಶ್, ಸಂತೋಷ್, ಶಿವ ಪಾಂಡೆ, ಪ್ರಸಾದ್,ವೆಂಕಟೇಶ್ ಮತ್ತಿತರರು ಇದ್ದರು.