ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅಗಸ್ಟ್ 4ರಿಂದ 6ರವರೆಗೆ ಗ್ರಾಮದೇವತೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಎಲ್ಲರ ಸಹಕಾರದಿಂದ ನಿರೀಕ್ಷೆಗೂ ಮೀರಿ ಅತ್ಯಂತ ಯಶಸ್ವಿಯಾಗಿ ಹಾಗೂ ಶಾಂತಿಯುತವಾಗಿ ನಡೆದು ಸುಸಂಪನ್ನವಾಗಿದ್ದು, ಇದೀಗ ಅ.18ರ ಮಂಗಳವಾರ ದೇವಿ ಗದ್ದುಗೆಯಲ್ಲಿ ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಮುತ್ತೈದೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅಂದೇ ಹೊಸದಾಗಿ ಮಾರಿಕಾಂಬ ದೇವಿ ಹೆಸರಿನಲ್ಲಿ ಕೋಣವನ್ನು ಬಿಡಲಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಎ.ಧರ್ಮಪ್ಪ ತಿಳಿಸಿದರು.

ಜಾತ್ರಾ ಮಹೋತ್ಸದ ಎಲ್ಲಾ ಸದಸ್ಯರು, ಹಾಗೂ ಪಟ್ಟಣದ ಪ್ರಮುಖರು, ಯುವಕರೊಂದಿಗೆ ಶುಕ್ರವಾರ ಪಟ್ಟಣದ ಮಾರಿಕಾಂಬ ದೇವಸ್ಥಾನದ ಅವರಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಊರಿನ ಗೌಡರಾದ ಮಾಲೀಗೌಡರು, ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ನೇತೃತ್ವದಲ್ಲಿ ಮಾರಿಕಾಂಬ ಜಾತ್ರಾ ಮಹೋತ್ಸವ ಅ.4, 5, ಮತ್ತು 6 ಮೂರು ದಿನಗಳ ಕಾಲ ಅತ್ಯಂತ ಸಂಭ್ರಮ, ಸಡಗರ, ಹಾಗೂ ಅದ್ಧೂರಿಯಾಗಿ ನಡೆಯುವಲ್ಲಿ ಪಟ್ಟಣದ ಎಲ್ಲಾ ಮುಖಂಡರು, ವರ್ತಕರು, ರೈತರು, ಸೇರಿದಂತೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆ, ಬೆಸ್ಕಾಂ ಇಲಾಖೆ, ಎಲ್ಲಾ ಇಲಾಖೆಗಳ ನೌಕರರು, ವಿಶೇಷವಾಗಿ ಯುವ ಸಮೂಹ ಸಹಕರಿಸಿ, ಜಾತ್ರೆಯು ಯಶಸ್ವಿಯಾಗಲು ಕಾರಣಕರ್ತರಾಗಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಮಾರಿಕಾಂಬ ಜಾತ್ರಾಮಹೋತ್ಸವಕ್ಕೆ 5 ಸಾವಿರ ರು., 10 ಸಾವಿರ ರು.ಗೂ ಮೇಲ್ಪಟ್ಟು ದೇಣಿಗೆ ನೀಡಿದ ಭಕ್ಕಾದಿಗಳಿಗೆ ವಿಶೇಷವಾಗಿ ದೇವಿಯ ಅರಿಶಿಣ, ಕುಂಕುಮ, ಸಿಹಿ ಪ್ರಸಾದೊಂದಗೆ ಅವರ ಮನೆಗಳಿಗೆ ತೆರಳಿ ಸಮಿತಿವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.


ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಆಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ , ಈ ಬಾರಿ ಇಡೀ ಜಿಲ್ಲೆಯಲ್ಲೆಯಲ್ಲಿಯೇ ಹೊನ್ನಾಳಿ ಮಾರಿಕಾಂಬ ಜಾತ್ರಾಮಹೋತ್ಸವ ದಾಖಲೆಯ ರೀತಿಯಲ್ಲಿ ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.

ಉತ್ಸವ ಸಮಿತಿ ಅಧ್ಯಕ್ಷ ವಿಜಯೇಂದ್ರಪ್ಪ, ಮಾಲೀಗೌಡರು,ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್,ಕಾರ್ಯದರ್ಶಿ ಮಂಜುನಾಥ್,ಸಹಕಾರ್ಯದರ್ಶಿ ಎಚ್.ಸಿ.ಪ್ರಕಾಶ್, ರೇವಣಸಿದ್ದಪ್ಪ ಮೂಲಿ, ದೇವರಾಜ್, ಖಾಜಾಂಚಿ, ಕೆ.ಪುಟ್ಟಪ್ಪ, ಚಂದ್ರಗುಂಡ,ಗಾಳೇಶ್,ಸಣ್ಣಸಿದ್ದಪ್ಪ ಕಾಯಿಬುರುಡೆ, ರಾಜೇಂದ್ರ, ಮುಖಂಡರು ಇದ್ದರು.