ಸಾರಾಂಶ
ಕನ್ನಡಪ್ರಭ ವಾರ್ತೆ, ಕಾಪು
ಇಲ್ಲಿನ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಬಡಾ ಗ್ರಾಪಂನ ಉಚ್ಚಿಲ ಗ್ರಾಮದ ರಾಹೆ ೬೬ ರ ಬಳಿ ಸರ್ವೀಸ್ ರಸ್ತೆ ಬಳಿ ೧೭ ಲಕ್ಷ ರು. ವೆಚ್ಚದ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಗೆ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮತ್ತು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಗುದ್ದಲಿ ಪೂಜೆ ಅವರು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ, ಮಾರುಕಟ್ಟೆ ಒಂದು ಆರ್ಥಿಕ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ, ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಮತ್ತು ಸಮಾಜದ ಆರ್ಥಿಕ ಪ್ರಗತಿಗೆ ಮಾರುಕಟ್ಟೆ ಪ್ರಾಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇಲ್ಲಿನ ಅದಾನಿ ಪವರ್ ಲಿಮಿಟೆಡ್‌ನ ಟಿಪಿಪಿ ತನ್ನ ಸಿಎಸ್‌ಆರ್ ಯೋಜನೆಯಡಿ ಬಡಾ ಪಂಚಾಯತ್‌ಗೆ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಸುಮಾರು ೩ ಕೋಟಿ ರು. ಅನುದಾನ ಮೀಸಲಿಟ್ಟಿದ್ದು, ಇವರೆಗೆ ೧.೧೯ ಕೋಟಿ ರು. ನಷ್ಟು ಅಭಿವೃದ್ಧಿ ಕೆಲಸಗಳನ್ನು ಅದಾನಿ ಫ಼ೌಂಡೇಶನ್ ಪೂರ್ಣಗೊಳಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ದೀಪಕ್ ಎರ್ಮಾಳು, ಸದಸ್ಯರಾದ ರಮೇಶ್ ಅಂಚನ್, ಚಂದ್ರಶೇಖರ ಕೋಟ್ಯಾನ್, ಹರಿಪ್ರಸಾದ್, ಇಂದಿರಾ ಶೆಟ್ಟಿ, ಮೋಹಿನಿ, ಕಲಾವತಿ, ನಿರ್ಮಲಾ ರಾಕೇಶ್, ತಾಪಂ ಮಾಜಿ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್, ಅದಾನಿ ಪವರ್ ಲಿಮಿಟೆಡ್‌ನ ಏಜಿಎಂ ರವಿ ಆರ್. ಜೇರೆ, ಅದಾನಿ ಫ಼ೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.