ಮರ್ಣೆ: ಮುಚ್ಚಿ ಹೋಗಿದ್ದ ‘ಪೊಟ್ಟುಕೆರೆ’ಗೆ ಧರ್ಮಸ್ಥಳ ಯೋಜನೆ ಕಾಯಕಲ್ಪ

| Published : Apr 24 2025, 11:50 PM IST / Updated: Apr 24 2025, 11:51 PM IST

ಮರ್ಣೆ: ಮುಚ್ಚಿ ಹೋಗಿದ್ದ ‘ಪೊಟ್ಟುಕೆರೆ’ಗೆ ಧರ್ಮಸ್ಥಳ ಯೋಜನೆ ಕಾಯಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮರ್ಣೆ ಗ್ರಾಮ ವ್ಯಾಪ್ತಿಯ ರಾಧನಾಯಕ್ ಶಾಲಾ ಬಳಿ ಮುಚ್ಚಿ ಹೋಗಿಸುವ ಸುಮಾರು 50 ಸೆಂಟ್ಸ್ ಜಾಗದಲ್ಲಿ ಗುರುತಿಸಿಕೊಂಡಿರುವ ‘ಪೊಟ್ಟುಕೆರೆ’ಗೆ ಅಮೃತಕೆರೆ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕೆರೆ 50 ವರ್ಷಗಳ ಹಿಂದೆಯೆ ಹೂಳು ತುಂಬಿ ಮುಚ್ಚಿಹೋಗಿತ್ತು . ಜೊತೆಗೆ ಈ ಭಾಗದಲ್ಲೊ‌ ನೀರಿನ ಒರತೆಯು ಕಮ್ಮಿಯಾಗಿತ್ತು.

ಮರ್ಣೆ ಗ್ರಾಮ ಪಂಚಾಯಿತಿ, ಸ್ಥಳೀಯರ ಸಹಕಾರ । 50 ಸೆಂಟ್ಸ್‌ ವ್ಯಾಪ್ತಿಯ ಜಲಮೂಲ ಈಗ ‘ಅಮೃತಕೆರೆ’

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ಮುಚ್ಚಿಹೋಗಿದ್ದ ಕೆರೆ ಪುನಶ್ಚೇತನಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗು ಮರ್ಣೆ ಗ್ರಾಮ ಪಂಚಾಯಿತಿ ಹಾಗು ಸ್ಥಳೀಯರ ಸಹಕಾರದಿಂದ ಯೋಜನೆ ಕಾರ್ಯಗತಗೊಳಿಸಲಾಗಿದೆ

ಮರ್ಣೆ ಗ್ರಾಮ ವ್ಯಾಪ್ತಿಯ ರಾಧನಾಯಕ್ ಶಾಲಾ ಬಳಿ ಮುಚ್ಚಿ ಹೋಗಿಸುವ ಸುಮಾರು 50 ಸೆಂಟ್ಸ್ ಜಾಗದಲ್ಲಿ ಗುರುತಿಸಿಕೊಂಡಿರುವ ‘ಪೊಟ್ಟುಕೆರೆ’ಗೆ ಅಮೃತಕೆರೆ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕೆರೆ 50 ವರ್ಷಗಳ ಹಿಂದೆಯೆ ಹೂಳು ತುಂಬಿ ಮುಚ್ಚಿಹೋಗಿತ್ತು . ಜೊತೆಗೆ ಈ ಭಾಗದಲ್ಲೊ‌ ನೀರಿನ ಒರತೆಯು ಕಮ್ಮಿಯಾಗಿತ್ತು.

ಕಳೆದ್ದು , ಕುಮೇರಿಮನೆ, ಕೋರಿಪಲ್ಕೆ ,ಕೆಂಜಿಲ ಸೇರಿದಂತೆ ಅಮೃತನಗರ ವ್ಯಾಪ್ತಿಯ ಸುಮಾರು 500 ಕುಟುಂಬಗಳಿಗೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿತ್ತು. ಅದರಲ್ಲೂ ವಾರ್ಷಿಕವಾಗಿ‌‌ ಮೂರು ಬೆಳೆ ಬೆಳೆಯುತಿದ್ದರು .

ಅಮೃತಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮಗ್ರಾಮ ನಮ್ಮ ಕೆರೆ’ ಯೋಜನೆಯಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ. ಅದರಲ್ಲೂ ಮರ್ಣೆ ಗ್ರಾಮ ಪಂಚಾಯಿತಿ ಹಾಗು ಸ್ಥಳೀಯರು ಸಹಕಾರ ನೀಡುತಿದ್ದಾರೆ.

ಈಗಾಗಲೆ ಈ ಕೆರೆ ಅಭಿವೃದ್ದಿಗಾಗಿ ಸಮಿತಿ ರಚಿಸಿದ್ದು ಸಮಿತಿಯಿಂದಲು ಸಹಕಾರ ಸಿಗುತ್ತಿದೆ. ಈಗಾಗಲೆ ಸ್ಥಳೀಯ ಕೃಷಿಕರು ಫಲವತ್ತಾದ ಕೆರೆಯ ಮಣ್ಣನ್ನು ತಮ್ಮ ಕೃಷಿ ಭೂಮಿಗಳಿಗೆ ಉಪಯೋಗಿಸುತಿದ್ದಾರೆ. ಈಗಾಗಲೆ ಸುಮಾರು 257 ಕ್ಕೂ ಹೆಚ್ಚು ಲೋಡ್ ಮಣ್ಣು ಹೊರತೆಗೆಯಲಾಗಿದ್ದು ನೀರಿನ ಸಂಗ್ರಹಣಾ ಮಟ್ಟ ಹೆಚ್ಚಿಸಲಾಗುತ್ತಿದೆ.

ಹತ್ತಿರದಲ್ಲಿ ಮರ್ಣೆ ಗ್ರಾಮ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಯಲಾಗಿದ್ದು ನೀರು ಲಭ್ಯವಾಗಿಲ್ಲ. ಈ ಕೆರೆಯ ನೀರು ಬಳಸಿಕೊಂಡು ಜಲಮರುಪೂರಣಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆ ಹಾಕಲಾಗಿದೆ. ಅದರಲ್ಲೂ ಈ ಕೆರೆಯ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಹಾಗೂ ಸುತ್ತಲೂ ತಡೆಗೋಡೆ ನಿರ್ಮಾಣವನ್ನು ಸ್ಥಳೀಯಾಡಳಿತ ಮಾಡಲಿದೆ.

ಸ್ಥಳೀಯರಲ್ಲಿ ಸಂತಸ: ಮುಂಗಾರು ಪೂರ್ವಮಳೆ ಸುರಿಯುತ್ತಿರುವ ಕಾರಣ ಈ ಕೆರೆಯಲ್ಲಿ ನೀರಿನ ಸಾಮರ್ಥ್ಯ ಹೆಚ್ಚಿದ್ದು ಸ್ಥಳೀಯ ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗಿದೆ. ಅದರಲ್ಲೂ ಅಮೃತಕೆರೆ ಅಭಿವೃದ್ದಿ ಮೂಲಕ ಸ್ಥಳಿಯವಾಗಿ ಕಾಡುತಿದ್ದ ನೀರಿನ ಬರವು ತಾತ್ಕಾಲಿಕ ಶಮನವಾದಂತಾಗಿದೆ.

.......................

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನಮ್ಮಗ್ರಾಮ ನಮ್ಮ ಕೆರೆ ಯೋಜನೆಯಿಂದ ಕೆರೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ನೀರಿನ‌ ಸಂಗ್ರಹಣೆ ಹೆಚ್ಚಿಸಿ ಸ್ಥಳೀಯವಾಗಿ ನೀರಿನ‌ ಬರ ಅಟ್ಟುವುದೆ ಯೋಜನೆ ಮುಖ್ಯ ಉದ್ದೇಶ.

-ಉಮೇಶ್, ಹೆಬ್ರಿ ವಲಯ ಕೃಷಿ ಅಧಿಕಾರಿ. ಕೆರೆ ಅಭಿವೃದ್ದಿಯಿಂದ ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ವೇಗ ದೊರೆಯಲಿದೆ. ಅದರಲ್ಲೂ 500 ಕುಟುಂಬಗಳು ಸರ್ವ ಋತು ಕೃಷಿ ಬೆಳೆಯಲು ಸಹಕಾರಿ.

-ಅರುಣ್ ಭಟ್, ಅಧ್ಯಕ್ಷ, ಅಮೃತಕೆರೆ ಅಭಿವೃದ್ಧಿ ಸಮಿತಿ.

ಮರ್ಣೆ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೆ ಮೋರಿ ಅಳವಡಿಕೆ ಕಾರ್ಯ ಮಾಡಲಾಗಿದೆ. ಮುಂದೆ ವಾಕಿಂಗ್ ಟ್ರ್ಯಾಕ್ ಸೇರಿದಂತೆ ಸುತ್ತಲೂ ಬೇಲಿ‌ ನಿರ್ಮಾಣ, ಕೆರೆಯ ಪಕ್ಕದಲ್ಲಿರುವ ಬೋರ್ ವೆಲ್‌ಗೆ ಜಲಮರುಪೂರಣ ಕಾರ್ಯ ನಡೆಯಲಿದೆ.

-ತಿಲಕ್ ರಾಜ್, ಪಿಡಿಒ, ಮರ್ಣೆ ಗ್ರಾ.ಪಂ.