ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕದ ಭೂಮಿ ಸದಾ ಸಂತರ ನಾಡಕ್ಕೆ ಹೆಸರುವಾಸಿಯಾಗಿದ್ದು, ಈ ನಾಡಿನಲ್ಲಿ ಸಂತರಾದಂತಹ ಬಸವಣ್ಣನವರು, ಕನಕದಾಸರು ಮತ್ತು ಪುರಂದರದಾಸ ಅವರಂತಹ ಅನೇಕ ಮಹಾಪುರುಷರ ನಾಡಾಗಿದೆ ಎಂದು ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ನುಡಿದರು.ನಗರದ ಮೈಲೂರ್ ರಸ್ತೆಯಲ್ಲಿರುವ ಗುರು ನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಭಾನುವಾರ ಗುರು ತೇಗ್ ಬಹಾದ್ದೂರ್ ಅವರ 350ನೇ ಶಹೀದಿ ವರ್ಷದ ಅಂಗವಾಗಿ ಸಾಹಿತ್ಯ ಅಕಾಡೆಮಿ ಹಾಗೂ ಗುರು ನಾನಕ ಝಿರಾ ಸಾಹೇಬ್ ಬೀದರ ವತಿಯಿಂದ ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೀದರ್ ಸಾಂಸ್ಕೃತಿಕ ನಗರದ ಜೊತೆಗೆ ಆಧ್ಯಾತ್ಮಿಕ ಕೇಂದ್ರವಾಗಿದೆ. ಗುರು ನಾನಕ ಅವರ ಪಾದಾರ್ಪಣೆಯಿಂದ ಕುಡಿಯುವ ನೀರಿನ ದಾಹ ಇಲ್ಲಿನ ಜನರಿಗೆ ನಿಗಿಸಲಾಗಿದೆ ಎಂದು ತಿಳಿಸಿದರು.ಗುರು ತೇಗ್ ಬಹಾದ್ದೂರ್ ಅವರು ಬೇರೆಯವರ ಧರ್ಮವನ್ನು ರಕ್ಷಿಸಲು ತಮ್ಮ ಜೀವ ಸಮರ್ಪಣೆ ಮಾಡಿದವರು ಶಹೀದ್ ತೇಗ್ ಬಹಾದ್ದೂರ್ ಅವರ ಸಂದೇಶ ಯುವ ಪಿಳಿಗೆಗೆ ಮಾದರಿಯಾಗಿದೆ ಎಂದರು.
ಭಾರತ ಸರ್ಕಾರದ ಸಾಂಸ್ಕೃತಿಕ ಮಂತ್ರಾಯಲಯದಿಂದ ಇಂತಹ ಕಾರ್ಯಕ್ರಮಗಳ ಅಯೋಜಿನೆಯಿಂದ ಜನರಲ್ಲಿ ದೇಶ ಭಕ್ತಿ ಹಾಗೂ ಗುರು ಭಕ್ತಿಯಿಂದ ಯುವಕರಲ್ಲಿ ಪರಮತ್ಯಾಗ ಮಾಡುವಂತಹ ಮನೋಭಾವನೆ ಉಂಟಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ವರುಣಗುಲಾಟಿ, ಪಂಜಾಬ್‌ನ ಸಾಹಿತ್ಯ ಅಕಾಡೆಮಿಯ ಸಂಯೋಜಕ ರಾವೆಲ್ ಸಿಂಗ್, ಖ್ಯಾತ ಪಂಜಾಬಿ ಲೇಖಕ ಮನಮೋಹನಸಿಂಗ್, ಬೀದರಿನ ನಾನಕ ಝಿರಾ ಸಾಹೇಬ್ ಫೌಂಡೆಷನ್‌ನ ಅಧ್ಯಕ್ಷ ಎಸ್. ಬಲಬೀರಸಿಂಗ್, ಸಾಹಿತ್ಯ ಅಕಾಡೆಮಿಯ ಉಪ ಕಾರ್ಯದರ್ಶಿ ಕುಮುದ್ ಶರ್ಮಾ ಇತರರು ಹಾಜರಿದ್ದರು.
ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ವಂದಿಸಿದರು. ಕರ್ನಲ್ ಆರ್.ಡಿ. ಸಿಂಗ್, ಸರದಾರ ಪುನಿತ್ ಸಿಂಗ್ ಮತ್ತು ಪವಿತ ಸಿಂಗ್, ಸಂಸ್ಥೆಯ ಎಲ್ಲಾ ಸಿಬ್ಬಂದಿ ಇದ್ದರು.