ಸಾರಾಂಶ
ಹೊನ್ನಾಳಿ ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ.ನಿ. ನೂತನ ಅಧ್ಯಕ್ಷರಾಗಿ ಮುಕ್ತೇನಹಳ್ಳಿಯ ಮರುಳಸಿದ್ದಪ್ಪ, ಉಪಾಧ್ಯಕ್ಷರಾಗಿ ದಿಡಗೂರು ಜಿ.ಎಚ್. ತಮ್ಮಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ಹೊನ್ನಾಳಿ: ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ.ನಿ. ನೂತನ ಅಧ್ಯಕ್ಷರಾಗಿ ಮುಕ್ತೇನಹಳ್ಳಿಯ ಮರುಳಸಿದ್ದಪ್ಪ, ಉಪಾಧ್ಯಕ್ಷರಾಗಿ ದಿಡಗೂರು ಜಿ.ಎಚ್. ತಮ್ಮಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ನ.2ರಂದು ಸಂಘದ ನಿರ್ದೇಶಕರ ಚುನಾವಣೆ ನಡೆದಿದ್ದು, ಆಯ್ಯೆಯಾದ 13 ನಿರ್ದೇಶಕರ ಮಂಡಳಿಗೆ ಶುಕ್ರವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮುಕ್ತೇನಹಳ್ಳಿ ಮರುಳಸಿದ್ದಪ್ಪ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸಹ ದಿಡಗೂರು ಗ್ರಾಮದಲ್ಲಿ ಜಿ.ಎಚ್. ತಮ್ಮಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಚುನಾವಣಾಧಿಕಾರಿ, ತಾಲೂಕು ಸಹಕಾರ ಅಭಿವೃದ್ಧಿ ಆಧಿಕಾರಿ ನವೀನ್ ಕುಮಾರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.ನಿರ್ದೇಶಕರಾದ ಕೆ.ಜಿ,ರೇವಣಸಿದ್ದಪ್ಪ, ಜಿ.ಎನ್. ಶಿವನಗೌಡ, ಕೆ.ಜಿ.ರವಿಕುಮಾರ್, ಮನು, ಟಿ.ಜಿ.ರಮೇಶ್ ಗೌಡ, ಕೆ.ಎಲ್. ರಂಗನಾಥ, ಜಿ.ಪಿ,ಶೋಭಾ, ಎಂ.ಆರ್.ನಾಗರತ್ನ, ಬಿ.ಬಸವರಾಜಪ್ಪ, ಬಿ.ಎಲ್. ಕುಮಾರ ಸ್ವಾಮಿ, ನಾಮಿನಿ ಸದಸ್ಯರಾದ ಎಚ್.ಬಸವರಾಜಪ್ಪ, ಮತ್ತು ಸರಳಿನಮನೆ ರಾಜು, ಟಿಎಪಿಸಿಎಂಎಸ್ ಕಾರ್ಯದರ್ಶಿ ಮುರುಗೇಶಪ್ಪ, ಗೋಪಿ, ಸುಧಾ, ಸಿಬ್ಬಂದಿ ಇದ್ದರು.
ಆಯ್ಕೆ ಬಳಿಕ ಆಗಮಿಸಿದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಕಾಂಗ್ರೆಸ್‌ನ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಸನ್ಮಾನಿಸಿ, ಶುಭ ಕೋರಿದರು. ಮುಖಂಡರು ಸಹ ಅಭಿನಂದಿಸಿದರು.- - -
-14ಎಚ್.ಎಲ್.ಐ2;;Resize=(128,128))
;Resize=(128,128))
;Resize=(128,128))