ಪರ್ವತಿ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ ಲೋಕಾರ್ಪಣೆ

| Published : Jan 23 2024, 01:49 AM IST

ಪರ್ವತಿ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ: ಸಮೀಪದ ಪರ್ವತಿ ಗ್ರಾಮ ಹತ್ತಿರದಲ್ಲಿ ನೂತನ ಶ್ರೀ ಮಾರುತೇಶ್ವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಜರುಗಿತು. ಪಟ್ಟಣದಿಂದ ಪರ್ವತಿ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಈ ನೂತನ ಶ್ರೀ ಮಾರುತೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರಾಣಪ್ರತಿಷ್ಠಾನ ಸಂದರ್ಭದಲ್ಲಿಯೇ ಇಲ್ಲಿನ ಶ್ರೀ ಮಾರುತೇಶ್ವರ ದೇವಸ್ಥಾನ ಲೋಕಾರ್ಪಣೆಗೆ ಯುವಕರು ನಿರ್ಧರಿಸಿದ್ದು, ಇಂದು ಶ್ರೀರಾಮಚಂದ್ರನ ಬಲಗೈ ಬಂಟ ಹನುಮಾನ ದೇವಸ್ಥಾನ ಲೋಕಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಮೀಪದ ಪರ್ವತಿ ಗ್ರಾಮ ಹತ್ತಿರದಲ್ಲಿ ನೂತನ ಶ್ರೀ ಮಾರುತೇಶ್ವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಜರುಗಿತು.

ಪಟ್ಟಣದಿಂದ ಪರ್ವತಿ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಈ ನೂತನ ಶ್ರೀ ಮಾರುತೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರಾಣಪ್ರತಿಷ್ಠಾನ ಸಂದರ್ಭದಲ್ಲಿಯೇ ಇಲ್ಲಿನ ಶ್ರೀ ಮಾರುತೇಶ್ವರ ದೇವಸ್ಥಾನ ಲೋಕಾರ್ಪಣೆಗೆ ಯುವಕರು ನಿರ್ಧರಿಸಿದ್ದು, ಇಂದು ಶ್ರೀರಾಮಚಂದ್ರನ ಬಲಗೈ ಬಂಟ ಹನುಮಾನ ದೇವಸ್ಥಾನ ಲೋಕಾರ್ಪಣೆ ಮಾಡಿದರು.

ನೂತನ ದೇವಸ್ಥಾನ ಉದ್ಘಾಟನೆ ನಿಮಿತ್ತ ಶ್ರೀ ಮಾರುತೇಶ್ವರ ದೇವರಿಗೆ ಅಭಿಷೇಕ, ಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ನೂತನ ಶ್ರೀ ಮಾರುತೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರವೀಂದ್ರನಾಥ ಪೂಜಾರಿ, ಲಕ್ಷ್ಮಣ ಚಂದರಗಿ, ರಾಮಣ್ಣ ಚಂದರಗಿ, ರಾಮಣ್ಣ ಪೂಜಾರಿ, ಹನಮಂತ ತಳವಾರ, ಯಲ್ಲಪ್ಪ ಮನ್ನೂರ, ಭೀಮಪ್ಪ ಚೂರಿ, ಹನುಮಂತ ಸಂಗೋಂಧಿ, ಸಚಿನ ಗಾಣಿಗೇರ, ಕಾಳಿಂಗಪ್ಪ ಜೋಗಿನ, ಗುಳೇದಗುಡ್ಡ ಹಾಗೂ ಪರ್ವತಿ ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.