ಕದ್ರಿಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ

| Published : Feb 02 2025, 11:47 PM IST

ಸಾರಾಂಶ

ಸುಮಾರು 450ಕ್ಕೂ ಮಿಕ್ಕಿ ಸಾರ್ವಜನಿಕರು, ಆಮಂತ್ರಿತರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ, ಕಲ್ಕೂರ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಕದ್ರಿ ದೇವಸ್ಥಾನದ ಪ್ರಾಂಗಣದಲ್ಲಿ 18ನೇ ವರ್ಷದ ‘ಸಾಮೂಹಿಕ 108 ಸೂರ್ಯ ನಮಸ್ಕಾರ’ ಕಾರ್ಯಕ್ರಮ ಭಾನುವಾರ ನಡೆಯಿತು.

ಸುಮಾರು 450ಕ್ಕೂ ಮಿಕ್ಕಿ ಸಾರ್ವಜನಿಕರು, ಆಮಂತ್ರಿತರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ ಮಾತನಾಡಿ, ಯೋಗವು ಭಾರತದ ಒಂದು ಅಮೂಲ್ಯ ಕೊಡುಗೆ. ಸೂರ್ಯ ನಮಸ್ಕಾರ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಅಭ್ಯಾಸ. ಅದರೊಂದಿಗೆ ಪೌರಾಣಿಕ, ಅಧ್ಯಾತ್ಮಿಕ ಹಿನ್ನೆಲೆ ಇರುವ ಆದಿ ಯೋಗಿ ಮಹೇಶ್ವರನ ಸನ್ನಿಧಾನದಲ್ಲಿ ರಥಸಪ್ತಮಿಯ ಪುಣ್ಯ ಪರ್ವದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವು ಇನ್ನಷ್ಟು ಪವಿತ್ರ ಮತ್ತು ಪುಣ್ಯ ಫಲ ಹೊಂದಿದೆ ಎಂದು ಹೇಳಿದರು.

ಮನೋವಿಜ್ಞಾನ ತಜ್ಞ ಡಾ. ರವೀಶ್ ತುಂಗಾ, ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗ ಮಾತನಾಡಿದರು. ಸುಭಾಶ್ಚಂದ್ರ ಕಾಂಚನ್ ಸ್ವಾಗತಿಸಿದರು. ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಧನಂಜಯ ಕೆ. ವಂದಿಸಿದರು. ಉಪಾಧ್ಯಕ್ಷ ಪರಮೇಶ್ವರ ಪೂಜಾರಿ ನಿರೂಪಿಸಿದರು.