ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೈಭವದ ಸಾಮೂಹಿಕ (108) ಆಶ್ಲೇಷಾ ಬಲಿ ಪೂಜೆ ಶಿಬರೂರು ವೇದವ್ಯಾಸ ತಂತ್ರಿಗಳ ಉಪಸ್ಥಿತಿಯಲ್ಲಿ ವೈಭವದಿಂದ ಭಾನುವಾರ ನಡೆಯಿತು.ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಗ್ಗೆ 7.00 ರಿಂದ ದೀಪ ಪ್ರಜ್ವಲನೆ, ಭಜನೆ ಸಂಕೀರ್ತನೆ ನೆರವೇರಿತು. ಬೆಳಗ್ಗೆ 9.00 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ಆಶ್ಲೇಷಾ ಬಲಿ, ಪ್ರದಾನ ಹೋಮ, ಶ್ರೀದೇವರಿಗೆ 108 ಆಶ್ಲೇಷ ಬಲಿ ಪೂಜೆ, ಪಂಚಾಮೃತ ಸೇವೆ, ವಿಶೇಷ ತಂಬಿಲ ಸೇವೆ, ಸರ್ವ ಸೇವೆ, ಪ್ರಸನ್ನ ಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಮಂದಿ ಭಾಗವಹಿಸಿದರು.ಈ ಸಂದರ್ಭ ಕ್ಷೇತ್ರದ ಅರ್ಚಕ ರಾಜೇಶ್ ಭಟ್ ಮಾಣೂರು, ಶಾಸಕ ಡಾ. ಭರತ್ ಶೆಟ್ಟಿ, ಕರಾವಳಿ ಕಾಲೇಜು ಸಮೂಹದ ಅಧ್ಯಕ್ಷ ಗಣೇಶ್ ರಾವ್, ಮಂಗಳೂರು ನಿಧಿ ಲ್ಯಾಂಡ್ ಇನ್ಫಾಸ್ಟ್ರಕ್ಚರ್ ಆಡಳಿತ ನಿರ್ದೇಶಕ ಪ್ರಶಾಂತ್ ಸನಿಲ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕಳ, ಮಾಜಿ ಸದಸ್ಯರಾದ ಪದ್ಮನಾಭ ಕೋಟ್ಯಾನ್, ಕುಡುಪು ಅನಂತಪದ್ಮನಾಭ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ್ ಕೆ., ಪೆದಮಲೆ ಕ್ಷೇತದ ಟ್ರಸ್ಟ್ ಕಾರ್ಯಾಧ್ಯಕ್ಷ ಆನಂದ ಸರಿಪಲ್ಲ, ದೇವಸ್ಥಾನದ ಮಾಜಿ ಮೊಕ್ತೇಸರ ಕುಂಞಣ್ಣ ಶೆಟ್ಟಿ, ನೀರುಮಾರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ್ ಜೆ. ಮಾಣೂರು, ಮುರಳೀಧರ ಕರ್ಕೇರ, ಉಮಾನಾಥ ಸುವರ್ಣ, ರಾಧಾಕೃಷ್ಣ, ಕೃಷ್ಣ ನಾಯ್ಕ, ಮೋಹಿನಿ ಮೋನಪ್ಪ, ಧನವಂತಿ, ವೇಣುಗೋಪಾಲ ಮತ್ತಿತರರು ಇದ್ದರು.