ಕನ್ನಡಪ್ರಭ ವಾರ್ತೆ ಜಮಖಂಡಿಅಪಘಾತದಲ್ಲಿ ಗಾಯಗೊಂಡಿರುವ ಉತ್ತರಾಧಿ ಮಠಾಧೀಶ ಸತ್ಯಾತ್ಮ ತೀರ್ಥ ಶ್ರೀಪಾದರು, ದಿವಾನ ಶಶಿ ಆಚಾರ್ಯ ಹಾಗೂ ಚಾಲಕ ಆಶೀಷ ರಾಯಚೂರ ಅವರು ಶೀಘ್ರ ಚೇತರಿಕೆ ಕಾಣಲೆಂದು ಪ್ರಾರ್ಥಿಸಲಾಯಿತು.
ಕನ್ನಡಪ್ರಭ ವಾರ್ತೆ ಜಮಖಂಡಿ
ಅಪಘಾತದಲ್ಲಿ ಗಾಯಗೊಂಡಿರುವ ಉತ್ತರಾಧಿ ಮಠಾಧೀಶ ಸತ್ಯಾತ್ಮ ತೀರ್ಥ ಶ್ರೀಪಾದರು, ದಿವಾನ ಶಶಿ ಆಚಾರ್ಯ ಹಾಗೂ ಚಾಲಕ ಆಶೀಷ ರಾಯಚೂರ ಅವರು ಶೀಘ್ರ ಚೇತರಿಕೆ ಕಾಣಲೆಂದು ಪ್ರಾರ್ಥಿಸಲಾಯಿತು.ನಗರದ ರಘೋತ್ತಮ ರಾಯರಮಠ ಹಾಗೂ ಪೋಸ್ಟ್ ಕಾಲೋನಿಯ ಆಂಜನೇಯ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ, ಮನ್ಯುಸೂಕ್ತ, ರಾಮಾಯಣ ಸುಂದರಕಾಂಡ ರಾಮನಾಮ ಜಪಗಳನ್ನು ಮಾಡುವ ಮೂಲಕ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರಘೋತ್ತಮರಾಯರ ಮಠ: ಸುಜಯೀಂದ್ರಾಚಾರ್ಯ ಮನಗೂಳಿ, ಯದುನಂದನ ಆಚಾರ ಗಲಗಲಿ, ಪ್ರಹಲ್ಲಾದ ಉಪಾಧ್ಯಾಯ, ರಾಜೇಂದ್ರ ಹುಲ್ಯಾಳಕರ, ಮುಕುಂದಾಚಾರ್ಯ ನಾಮಣ್ಣವರ, ರಘೋತ್ತಮಾಚಾರ್ಯ ಜೋಷಿ, ವೆಂಕಣ್ಣಾಚಾರ್ಯ ಜ್ಯೋಷಿ, ವಿನಾಯಕ ಕುಲಕರ್ಣಿ, ವಿಷ್ಣು ಕುಲಕರ್ಣಿ, ಆರ್,ಜಿ,ಕುಲಕರ್ಣಿ, ಗುರುರಾಜ ಕೌಜಲಗಿ, ಸಮೀರ ಕುಲಕರ್ಣಿ ಇದ್ದರು.ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪಾರಾಯಣ ಪ್ರಾರ್ಥನಾ ಸಭೆಯಲ್ಲಿ ರಾಘವೇಂದ್ರ ಉಮರ್ಜಿ, ವಾದಿರಾಜ ಗಲಗಲಿ, ಶ್ರೀನಿವಾಸ ದೇಶಪಾಂಡೆ, ರಾಮರಾವ ದೇಶಪಾಂಡೆ, ಅಶೋಕ ಕುಲಕರ್ಣಿ, ಗೋಪಾಪ ಪಾಟೀಲ, ನಾರಾಯಣ ದೇಸಾಯಿ ಹಾಗೂ ಮಹಿಳಾ ಮಂಡಲದ ಸದಸ್ಯೆಯರು ಭಾಗವಹಿಸಿ ಸಾಮೂಹಿಕ ಪಾರಾಯಣ ವಿಶೇಷ ಪ್ರಾರ್ಥನೆ ಸಲ್ಲಿಸಿದರು.