ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹ

| Published : Feb 19 2025, 12:45 AM IST

ಸಾರಾಂಶ

ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಬಡವರಿಗೆ ಆಶಾಕಿರಣವಾಗಿವೆ. ಆರ್ಥಿಕ ಹೊರೆ ತಗ್ಗಿಸಲು ಕೂಡ ಸಹಕಾರಿಯಾಗಿದ್ದು ಪ್ರತಿಯೊಬ್ಬರು ಇಂತಹ ಸಾಮೂಹಿಕ ವಿವಾಹಗಳಲ್ಲಿ ಶ್ರೀಗಳ ಸಮ್ಮುಖದಲ್ಲಿ ಆಶೀರ್ವಾದ ಪಡೆದು ಮದುವೆಯಾಗುವುದು ಪುಣ್ಯದ ಕಾರ್ಯವಾಗಿದೆ.

ಯಲಬುರ್ಗಾ:

ಜೀವನದಲ್ಲಿ ಕಷ್ಟ-ಸುಖ ಬಂದರೂ ನವ ದಂಪತಿಗಳು ಒಬ್ಬರಿಗೊಬ್ಬರು ಅರಿತುಕೊಂಡು ಜೀವನ ಸಾಗಿಸಬೇಕೆಂದು ಬಿಜೆಪಿಯ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಹೇಳಿದರು.

ತಾಲೂಕಿನ ಗೆದಗೇರಿ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ೧೬ನೇ ವರ್ಷದ ಪಂಚಕಳಸ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಬಡವರಿಗೆ ಆಶಾಕಿರಣವಾಗಿವೆ. ಆರ್ಥಿಕ ಹೊರೆ ತಗ್ಗಿಸಲು ಕೂಡ ಸಹಕಾರಿಯಾಗಿದ್ದು ಪ್ರತಿಯೊಬ್ಬರು ಇಂತಹ ಸಾಮೂಹಿಕ ವಿವಾಹಗಳಲ್ಲಿ ಶ್ರೀಗಳ ಸಮ್ಮುಖದಲ್ಲಿ ಆಶೀರ್ವಾದ ಪಡೆದು ಮದುವೆಯಾಗುವುದು ಪುಣ್ಯದ ಕಾರ್ಯವಾಗಿದೆ ಎಂದರು.

ಕುದರಿಮೋತಿ ಮೈಸೂರು ಮಠದ ಶ್ರೀವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿ ದಾನ-ಧರ್ಮ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಮಾನವರಲ್ಲಿ ದ್ವೇಷ, ಅಸೂಯೆ ಮತ್ತು ಕೆಟ್ಟ ವಿಚಾರಗಳನ್ನು ದೂರವಿಟ್ಟು ಪ್ರೀತಿ, ವಿಶ್ವಾಸ ಮತ್ತು ಇನ್ನೊಬ್ಬರಿಗೆ ಒಳಿತು ಮಾಡುವ ಮನೋಭಾವನೆ ಬೆಳೆಸಿಕೊಂಡು ಬದುಕಬೇಕು ಎಂದರು.

ಈ ವೇಳೆ ಮುಖಂಡರಾದ ಅಶೋಕ ಕೋಳಿಹಾಳ, ಬಸವರಾಜ ಮಾಸ್ತಿ, ದೊಡ್ಡನಗೌಡ ಗೌಡ್ರ, ಪ್ರಭುಲಿಂಗಪ್ಪ ಮಾಸ್ತಿ, ಶರಣಪ್ಪ ನಾಗೂರ, ವೀರಯ್ಯ ಹಿರೇಮಠ, ಸಿದ್ದಯ್ಯ ಶಾಸ್ತ್ರಿ, ಶರಣಪ್ಪ ಗೋಣಿ, ಬಸವರಾಜ ಬೆದವಟ್ಟಿ, ಶಂಕ್ರಪ್ಪ ದೇಸಾಯಿ, ರುದ್ರಪ್ಪ ಕೊಪ್ಪದ, ಶರಣಪ್ಪ ಬಳಿಗಾರ, ವೀರೇಶ, ಶರಣಯ್ಯ ಹಿರೇಮಠ, ಹನಮಗೌಡ ಕೋಳಿಹಾಳ, ಶರಣಪ್ಪ ಬತ್ತಿ, ಶರಣಪ್ಪ ಕುದರಿ, ಶರಣಪ್ಪ ಇಟಗಿ ಸೇರಿದಂತೆ ಮತ್ತಿತರರು ಇದ್ದರು.