ಸಾರಾಂಶ
ರಂಜಾನ್ ಅಂಗವಾಗಿ ಒಂದು ತಿಂಗಳ ರೋಜಾ (ಉಪವಾಸ) ಆಚರಣೆ ಬಳಿಕ ಸೋಮವಾರ ತಾಲೂಕಿನ ಮುಸ್ಲಿಂ ಬಾಂಧವರು ಪಟ್ಟಣದ ನಮಾಜ್ ಮಟ್ಟಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬ ಆಚರಿಸಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಂಜಾನ್ ಅಂಗವಾಗಿ ಒಂದು ತಿಂಗಳ ರೋಜಾ (ಉಪವಾಸ) ಆಚರಣೆ ಬಳಿಕ ಸೋಮವಾರ ತಾಲೂಕಿನ ಮುಸ್ಲಿಂ ಬಾಂಧವರು ಪಟ್ಟಣದ ನಮಾಜ್ ಮಟ್ಟಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬ ಆಚರಿಸಿದರು.ಮುಸ್ಲಿಂ ಮೌಲ್ವಿಗಳು ಮಾತನಾಡಿ, ಹಬ್ಬದ ಪ್ರಯುಕ್ತ ಉಳ್ಳವರು ಬಡವರಿಗೆ ಹಬ್ಬದ ಅಗತ್ಯ ವಸ್ತುಗಳನ್ನು ದಾನ ಮಾಡಿ, ಅವರೂ ಕೂಡ ತಮ್ಮಂತೆ ಹಬ್ಬ ಆಚರಿಸಲು ಸಹಾಯ ಮಾಡುವುದು ವಿಶೇಷ. ಆ ಮೂಲಕ ಲೋಕದಲ್ಲಿ ಮನುಷ್ಯರು ಪರಸ್ಪರ ಕೊಡು-ಕೊಳ್ಳುವ ಮೂಲಕ ಪರಸ್ಪರ ಪ್ರೀತಿ- ವಿಶ್ವಾಸಗಳಿಂದ ಬದುಕು ಸಾಗಿಸಬೇಕು ಎನ್ನುವುದು ರಂಜಾನ್ ಆಚರಣೆಯ ಪವಿತ್ರ ಸಿದ್ಧಾಂತವೇ ಆಗಿದೆ. ಈ ಪದ್ಧತಿಯನ್ನು ಸಮುದಾಯ ಬಾಂಧವರು ತಪ್ಪದೇ ಮುನ್ನಡೆಸಬೇಕು ಎಂದರು.
ಸಾಮೂಹಿಕ ಪಾರ್ಥನೆ ಕಾರ್ಯಕ್ರಮಗಳಲ್ಲಿ ನುರಾನಿ ಮಸೀದಿ ಅಧ್ಯಕ್ಷ ನಯಾಜ್ ಖಾನ್, ಜಾಮೀಯಾ ಮಸೀದಿ ಅಧ್ಯಕ್ಷ ರಹಮಾನ್ ಫಾರೂಕ್, ತಂಗಾಭದ್ರಾ ಬಡಾವಣೆ ಮಸೀದಿ ಅಧ್ಯಕ್ಷ ಸುಹೇಲ್, ಪಠಾಣ್ ವಾಡಿ ಮಸೀದಿ ಅಧ್ಯಕ್ಷ ಅಮಾನುಲ್ಲಾ, ಮುಸ್ಲಿಂ ಸಮುದಾಯ ಮುಖಂಡರಾದ ನಜ್ರತ್ ಉಲ್ಲಾ, ಸಜೀಬ್ ಉಲ್ಲಾ, ರೆಹಮಾನ್, ಸುಲೇಮಾನ್ ಖಾನ್ ಸೇರಿದಂತೆ ಹಲವಾರು ಮುಖಂಡರು, ಮುಸ್ಲಿಂ ಬಾಂಧವಾರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.- - - -31ಎಚ್.ಎಲ್.ಐ3.ಜೆಪಿಜಿ:
ಹೊನ್ನಾಳಿ ಪಟ್ಟಣದ ನಮಾಜ್ ಮಟ್ಟಿ ಬಳಿ ಸೋಮವಾರ ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))