ಸಾರಾಂಶ
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯ ಪ್ರಯುಕ್ತ ಲೋಕ ಕಲ್ಯಾಣರ್ಥ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಮಹೋತ್ಸವ ಸಂಪ್ರದಾಯದ ಆಚರಣೆಯಂತೆ ವೈಭವದಿಂದ ನಡೆಯಿತು. ಶುಕ್ರವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದ ಭರಣಿ ನಕ್ಷತ್ರದಲ್ಲಿ ಶ್ರೀಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಿ ಪೂಜಿಸಲಾಯಿತು.ಶ್ರೀಸ್ವಾಮಿಯ ಭಕ್ತರಿಗೆ ಪುರಸಭಾ ಸದಸ್ಯ ಶಿವಣ್ಣ ಹಾಗೂ ಕುಟುಂಬ ಸದಸ್ಯರು ಪ್ರಸಾದದ ರೂಪದಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯ ಪ್ರಯುಕ್ತ ಲೋಕ ಕಲ್ಯಾಣರ್ಥ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಮಹೋತ್ಸವ ಸಂಪ್ರದಾಯದ ಆಚರಣೆಯಂತೆ ವೈಭವದಿಂದ ನಡೆಯಿತು.ಶುಕ್ರವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದ ಭರಣಿ ನಕ್ಷತ್ರದಲ್ಲಿ ಶ್ರೀಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಿ ಪೂಜಿಸಲಾಯಿತು. ೧೦ ಗಂಟೆಯಿಂದ ಪುಣ್ಯಾಹ ವಾಚನ, ಸೇವಾರ್ಥದಾರರ ಸಂಕಲ್ಪ, ಶ್ರೀ ಮಹಾಗಣಪತಿ ಪೂಜೆ, ಕಂಕಣ ಧಾರಣೆ ಮಾಡಿಸಲಾಯಿತು. ೧೦.೩೦ರಿಂದ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಮಹೋತ್ಸವ ಪ್ರಾರಂಭಗೊಂಡು ೧ ಗಂಟೆಗೆ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು.
ಶ್ರೀಸ್ವಾಮಿಯ ಭಕ್ತರಿಗೆ ಪುರಸಭಾ ಸದಸ್ಯ ಶಿವಣ್ಣ ಹಾಗೂ ಕುಟುಂಬ ಸದಸ್ಯರು ಪ್ರಸಾದದ ರೂಪದಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು. ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ನಾರಾಯಣ ಭಟ್ಟರು, ರಾಮಣ್ಣ ಭಟ್ಟರು, ಹಳೇಬೀಡು ನರಸಿಂಹ ಪ್ರಸಾದ್, ಸಿಂಹಾದ್ರಿ, ಪಟ್ಟಾಭಿರಾಮ್, ನಾಗರಾಜ್, ವಿಜಯಕುಮಾರ್, ಇತರರು ಪೂಜಾ ಕೈಂಕರ್ಯ ನೆರವೇರಿಸಿದರು.