ನಂದಿಗಿರಿಧಾಮಕ್ಕೆ ಹೊಂದಿಕೊಂಡಂತೆಯೇ ಇರುವ ''''ಬ್ರಹ್ಮಗಿರಿ ಬೆಟ್ಟ''''ದಲ್ಲಿ ಈ ದಿಢೀರ್ ಬೆಳವಣಿಗೆ ಸಂಭವಿಸಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ದಿಢೀರನೆ ಸಂಭವಿಸಿದ ಈ ನಿಗೂಢ ಸ್ಪೋಟದ ತೀವ್ರತೆಗೆ ಬೆಟ್ಟದ ಮೇಲ್ಭಾಗದಲ್ಲಿದ್ದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಒಂದಕ್ಕೊಂದು ಅಪ್ಪಳಿಸುತ್ತಾ ಕೆಳಭಾಗಕ್ಕೆ ಉರುಳಿಬಿದ್ದಿವೆ.
ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರವಾಸಿ ತಾಣವಾದ ನಂದಿಗಿರಿಧಾಮದ ತೀರಾ ಸಮೀಪದಲ್ಲೇ ಭಾರಿ ನಿಗೂಢ ಸ್ಪೋಟವೊಂದು ಸಂಭವಿಸಿದ್ದು, ಸ್ಪೋಟದ ರಭಸಕ್ಕೆ ಬೆಟ್ಟದಲ್ಲಿದ್ದ ಬೃಹತ್ ಬಂಡೆಗಳು ಧರಗುರುಳಿ ಕೆಳಕ್ಕೆ ಬಿದ್ದಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಪುರಾಣ ಪ್ರಸಿದ್ಧ ನಂದಿಗಿರಿಧಾಮಕ್ಕೆ ಹೊಂದಿಕೊಂಡಂತೆಯೇ ಇರುವ ''''''''ಬ್ರಹ್ಮಗಿರಿ ಬೆಟ್ಟ''''''''ದಲ್ಲಿ ಈ ದಿಢೀರ್ ಬೆಳವಣಿಗೆ ಸಂಭವಿಸಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ದಿಢೀರನೆ ಸಂಭವಿಸಿದ ಈ ನಿಗೂಢ ಸ್ಪೋಟದ ತೀವ್ರತೆಗೆ ಬೆಟ್ಟದ ಮೇಲ್ಭಾಗದಲ್ಲಿದ್ದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಒಂದಕ್ಕೊಂದು ಅಪ್ಪಳಿಸುತ್ತಾ ಕೆಳಭಾಗಕ್ಕೆ ಉರುಳಿಬಿದ್ದಿವೆ. ಬೆಟ್ಟದ ಸಾಲಿನಿಂದ ಕಲ್ಲುಗಳು ಧುಮುಕುತ್ತಿದ್ದ ದೃಶ್ಯವು ಭೀಕರ ಭೂಕುಸಿತದ ಮಾದರಿಯಲ್ಲಿ ಕಂಡುಬಂದಿದ್ದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಲಕಾಲ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈ ಭೀಕರ ಹಾಗೂ ನಡುಕ ಹುಟ್ಟಿಸುವ ದೃಶ್ಯಗಳನ್ನು ಬೆಟ್ಟದ ಕೆಳಭಾಗದಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.ಸ್ಪೋಟದ ಶಬ್ದ ಹಾಗೂ ಬಂಡೆಗಳು ಉರುಳುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಹಾಗೂ ಪ್ರವಾಸಿಗರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಆದರೆ, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ಬ್ರಹ್ಮಗಿರಿ ಬೆಟ್ಟವು ನಂದಿಗಿರಿಧಾಮಕ್ಕೆ ತೀರಾ ನಿಕಟವಾಗಿದ್ದು, ನಿಗೂಢ ಸ್ಪೋಟಕ್ಕೆ ನೈಜ ಕಾರಣವೇನು? ಕಲ್ಲು ಗಣಿಗಾರಿಕೆ ಅಥವಾ ಸ್ಫೋಟದ ತೀವ್ರತೆಯಿಂದ ಹೀಗಾಗಿದೆಯೇ ಅಥವಾ ನೈಸರ್ಗಿಕವಾಗಿ ಬಂಡೆ ಕುಸಿದಿದೆಯೇ ಎಂಬುದರ ಬಗ್ಗೆ ಅರಣ್ಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಿಕೆಬಿ-5 ಮತ್ತು 6 ನಂದಿಗಿರಿಧಾಮಕ್ಕೆ ಹೊಂದಿಕೊಂಡಂತೆಯೇ ಇರುವ ''''''''ಬ್ರಹ್ಮಗಿರಿ ಬೆಟ್ಟ''''''''ದಲ್ಲಿ ಈ ದಿಢೀರಸ್ನಿಗೂಡ ಸ್ಪೋಟಕ್ಕೆ ಬಂಡೆಗಲ್ಲು ಗಳು ಉರುಳುತ್ತಿರುವುದು