ಮಂಗಳೂರಿನ ಎಂಆರ್‌ಪಿಎಲ್‌ ಕೋಕ್ ಸಲ್ಫರ್ ಘಟಕದ ಸಿಎಸ್‌ಟಿ ಮೂರನೇ ಪ್ಲಾಂಟ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಇದರಿಂದ ಎಂಆರ್‌ಪಿಎಲ್‌ ಸುತ್ತಮುತ್ತ ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂಆರ್‌ಪಿಎಲ್‌ ಆಸುಪಾಸಿನ ಸುಮಾರು 3 ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು ಈ ಹಾನಿಯು ಈ ಸ್ಪೋಟದ ಅಗಾಧತೆಯನ್ನು ತಿಳಿಸುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ ಮತ್ತು ಸಿಪಿಎಂ ಒತ್ತಾಯಿಸಿದೆ.

ಮಂಗಳೂರು : ಮಂಗಳೂರಿನ ಎಂಆರ್‌ಪಿಎಲ್‌ ಕೋಕ್ ಸಲ್ಫರ್ ಘಟಕದ ಸಿಎಸ್‌ಟಿ ಮೂರನೇ ಪ್ಲಾಂಟ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಇದರಿಂದ ಎಂಆರ್‌ಪಿಎಲ್‌ ಸುತ್ತಮುತ್ತ ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂಆರ್‌ಪಿಎಲ್‌ ಆಸುಪಾಸಿನ ಸುಮಾರು 3 ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು ಈ ಹಾನಿಯು ಈ ಸ್ಪೋಟದ ಅಗಾಧತೆಯನ್ನು ತಿಳಿಸುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ ಮತ್ತು ಸಿಪಿಎಂ ಒತ್ತಾಯಿಸಿದೆ.

ಎಂಆರ್‌ಪಿಎಲ್ ವಿಸ್ತರಿತ ಯೋಜನೆಯದ ಕೋಕ್ ಸಲ್ಫರ್ ಘಟಕ ಆರಂಭಗೊಂಡ ಸಂದರ್ಭದಲ್ಲಿಯೇ ಡಿವೈಎಫ್‌ಐ ಇದನ್ನು ವಿರೋಧಿಸಿದ್ದು ಮತ್ತು ಇದರ ಅಪಾಯದ ಮುನ್ಸೂಚನೆಯನ್ನು ಕೂಡ ನೀಡಿತ್ತು. ಆದರೆ ಸರ್ಕಾರ ಈವರೆಗೂ ಈ ಕುರಿತು ವಹಿಸಿರುವ ಮೌನ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಡಿವೖಎಫ್ಐ ಆರೋಪಿಸಿದೆ.

-----------------