Massive foot march demanding the release of water until November 30

-ಭಾರತೀಯ ಕೃಷಿಕ ಸಮಾಜ ಮಲ್ಲನಗೌಡ ಹಗರಟಗಿ ಮಾಹಿತಿ

--

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ನಾರಾಯಣಪುರ ಬಸವ ಸಾಗರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನವಂಬರ್ 30ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರೊಂದಿಗೆ ಬೃಹತ್ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಭಾರತೀಯ ಕೃಷಿಕ ಸಮಾಜ ರಾಜ್ಯ ಕಾರ್ಯದರ್ಶಿ ಮಲ್ಲನಗೌಡ ಹಗರಟಗಿ ತಿಳಿಸಿದ್ದಾರೆ.

ಅ.25 ರಂದು ಬೆಳಗ್ಗೆ 10 ಗಂಟೆಗೆ ಹುಣಸಗಿ ಪಟ್ಟಣದ ಮಹಾಂತ ಸ್ವಾಮಿ ವೃತ್ತದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುವದು. ನಂತರ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೂಲಕ ಕಾಮನಟಗಿ, ರಾಜನಕೋಳೂರು, ಕೊಡೆಕಲ್, ಮುಖಾಂತರ ನಾರಾಯಣಪುರಕ್ಕೆ ರೈತರೊಂದಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಹುಣಸಗಿಯಿಂದ ಕೊಡೆಕಲ್ಲವರೆಗೂ ಕೈಗೊಂಡು ಕೊಡೆಕಲ್ಲ ಬಸವೇಶ್ವರ ದೇವಸ್ಥಾನ (ಪ್ಯಾಟೆ ಗುಡಿಯಲ್ಲಿ) ವಾಸ್ತವ್ಯ ನಡೆಯಲಿದೆ. ಮತ್ತೆ ಬೆಳಗಿನ ಜಾವದಿಂದ ನಾರಾಯಣಪುರವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದು ನಾರಾಯಣಪುರದ ಮುಖ್ಯ ಇಂಜಿನಿಯರ್ ಕಚೇರಿ ವರೆಗೂ ಮುಖ್ಯ ಪಾದಯಾತ್ರೆ ನಡೆಯಲಿದೆ.

ನಾರಾಯಣಪುರದ ಮುಖ್ಯ ಇಂಜಿನಿಯರ್ ಕಚೇರಿ ಬಳಿ ಅನಿರ್ದಿಷ್ಟ ಅವಧಿ ಧರಣಿ ಹಮ್ಮಿಕೊಳ್ಳಲಾಗಿದ. ಈ ಧರಣಿಯಲ್ಲಿ ಜಿಲ್ಲೆಯ ಹತ್ತಿ ತೊಗರಿ ಶೇಂಗಾ ಭತ್ತ ಬೆಳೆಯ ಎಲ್ಲ ರೈತರು ಪಾಲ್ಗೊಳ್ಳಲಿದ್ದಾರೆ.

ನವೆಂಬರ್ 30ರವರೆಗೆ ನಿರಂತರ ನೀರು ಹರಿಸುವ ಮೂಲಕ ರೈತರ ಬೆಳೆಗಳನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಮತ್ತು ಸರ್ಕಾರ ಮುಂದಾಗುವವರೆಗೂ ಈ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-

23ವೈಡಿಆರ್‌13 : ಮಲ್ಲನಗೌಡ ಹಗರಟಗಿ.