ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೃಹತ್ ಅರೆಬೆತ್ತಲೆ ಮೆರವಣಿಗೆ

| Published : Nov 27 2024, 01:04 AM IST

ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೃಹತ್ ಅರೆಬೆತ್ತಲೆ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳ ಮೀಸಲಾತಿ ಜಾರಿಗಾಗಿ ಕಳೆದ ೩೦-೩೨ ವರ್ಷಗಳಿಂದ ಅವಿರತ ಹೋರಾಟ ಮಾಡಿಕೊಂಡು ಬಂದ ಮಾದಿಗ ಸಮಾಜಕ್ಕೆ ಇಲ್ಲಿಯವರೆಗೂ ನ್ಯಾಯ ಪರವಾದ ಸಂವಿಧಾನಬದ್ಧ ಹಕ್ಕು ಸಿಕ್ಕಿಲ್ಲ.

ಹಗರಿಬೊಮ್ಮನಹಳ್ಳಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೃಹತ್ ಅರೆಬೆತ್ತಲೆ ಮೆರವಣಿಗೆ ಹಾಗೂ ತಮಟೆ (ಹಲಗೆ) ಚಳುವಳಿಯನ್ನು ತಾಲೂಕು ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿಯವರು ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ವೃತ್ತದಿಂದ ಮಿನಿವಿಧಾನಸೌಧದವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟಿಸುತ್ತಾ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಈ ಕುರಿತು ತಾಲೂಕು ಅಂಬೇಡ್ಕರ್ ಸಂಘಟನೆಯ ಅಧ್ಯಕ್ಷ ಗದ್ದಿಕೇರಿ ದೊಡ್ಡಬಸಪ್ಪ ಮಾತನಾಡಿ, ಮಾದಿಗ ಸಮಾಜವು ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ಶಿಕ್ಷಣ, ಉದ್ಯೋಗ ಕ್ಷೇತ್ರದ ಮೀಸಲಾತಿಯಲ್ಲಿ ಅವಕಾಶ ವಂಚಿತವಾಗಿದೆ. ಒಳ ಮೀಸಲಾತಿ ಜಾರಿಗಾಗಿ ಕಳೆದ ೩೦-೩೨ ವರ್ಷಗಳಿಂದ ಅವಿರತ ಹೋರಾಟ ಮಾಡಿಕೊಂಡು ಬಂದ ಮಾದಿಗ ಸಮಾಜಕ್ಕೆ ಇಲ್ಲಿಯವರೆಗೂ ನ್ಯಾಯ ಪರವಾದ ಸಂವಿಧಾನಬದ್ಧ ಹಕ್ಕು ಸಿಕ್ಕಿಲ್ಲ. ೩೦ ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ಕಣ್ಣೂರೆಸುವ ತಂತ್ರವನ್ನು ಅನುಸರಿಸಿವೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸವೋಚ್ಚ ನ್ಯಾಯಾಲಯದ ಆದೇಶ ಗೌರವಿಸಿ, ಬಹು ಮುಖ್ಯವಾಗಿ ಮಾದಿಗ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ನ್ಯಾಯಬದ್ಧ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಮಾದೂರು ಕೆ.ಮಹೇಶ್ವರ ಮಾತನಾಡಿ, ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯದ್ಯಾಂತ ಸಂಘಟಿತರಾಗಿ ಸರ್ಕಾರವನ್ನು ಎಚ್ಚರಿಸಬೇಕಿದೆ. ಪರಿಶಿಷ್ಠ ಜಾತಿಗಳ ಒಳಮೀಸಲಾತಿ ಕಾನೂನುಬದ್ದವಾಗಿ ಜಾರಿಯಾಗುವವರೆಗೂ ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದರು. ಮುಖಂಡ ದಶಮಾಪುರ ಮರಿಯಪ್ಪ ಮಾತನಾಡಿದರು.

ಗ್ರಾಕೂಸ್ ಸಂಘಟನೆಯ ಕೋಗಳಿ ಮಲ್ಲೇಶ್, ವಿವಿಧ ಸಂಘಟನೆಗಳ ಆನಂದೇವನಹಳ್ಳಿ ಪ್ರಭಾಕರ, ಯಡ್ರಾಮನಹಳ್ಳಿ ಮರಿಯಪ್ಪ, ಹರೇಗೊಂಡನಹಳ್ಳಿ ದುರುಗಪ್ಪ, ಎ.ಮಹೇಶ್, ಪೂಜಾರ್ ಯಮನೂರಪ್ಪ, ಹೆಚ್.ಪ್ರಭಾಕರ, ಬೆಣಕಲ್ಲು ಪ್ರಕಾಶ್, ಪೂಜಾರ್ ಸಿದ್ದಪ್ಪ, ಒಂಟಿ ಮೇಘರಾಜ, ಬುಳ್ಳಪ್ಪ ಉಪ್ಪಾರಗಟ್ಟಿ, ಟಿ.ಅರ್ಜುನ, ಓಮೇಶ್, ಹೆಚ್.ಆರ್.ರಾಜ, ದೊಡ್ಡಬಸವರಾಜ, ಸುಭಾಷ್ ದುರುಗಪ್ಪ, ಕಾಳಿ ವಿಷ್ಣು, ಪೂಜಾರ್ ರಮೇಶ್, ಲೋಕಪ್ಪ, ಕಬ್ಬಳ್ಳಿ ಮೈಲಪ್ಪ, ತಂಬ್ರಹಳ್ಳಿ ಮರಿಯಪ್ಪ, ಹೇಮಣ್ಣ ಕಿತ್ನೂರು, ಕರೇಕಲ್ ದುರುಗಪ್ಪ, ಬ್ಯಾಲಾಳು ಮಂಜುನಾಥ, ಶಿವಕುಮಾರ, ಚಿಲುಗೋಡು ಮೈಲಪ್ಪ, ಮರಿಸ್ವಾಮಿ, ಲಿಂಗರಾಜ, ರಮೇಶ ಅಂಬಳಿ, ಹುಚ್ಚಂಗೆಪ್ಪ, ಅಂಬಳಿ ದೇವೆಂದ್ರಪ್ಪ ಇತರರಿದ್ದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಮಾದಿಗ ಸಮಾಜದವರು ಬೃಹತ್ ಅರೆಬೆತ್ತಲೆ ಮೆರವಣಿಗೆ ನಡೆಸಿ ಸರಕಾರವನ್ನು ಎಚ್ಚರಿಸಿದರು.